ಒಂದೇ ಮುಹೂರ್ತದಲ್ಲಿ ಇಬ್ಬರು ಯುವತಿಯರನ್ನು ವರಿಸಲಿರುವ ಫುಟ್ಬಾಲ್ ತಾರೆ ರೊನಾಲ್ಡಿನೊ..!

ಬ್ರೆಜಿಲ್ ದೇಶದ ಖ್ಯಾತ ಫುಟ್ಬಾಲ್ ಆಟಗಾರ ರೊನಾಲ್ಡಿನೋ, ಮದುವೆಯಾಗಲು ಸಿದ್ಧತೆ ನಡೆಸಿದ್ದಾರೆ. ವಿಶೇಷ ಏನೆಂದರೆ ರೋನಾಲ್ಡಿನೋ ಒಂದೇ ದಿನ, ಒಂದೇ ಸಮಯದಲ್ಲಿ ಒಟ್ಟಿಗೆ ಇಬ್ಬರು ಯುವತಿಯರನ್ನು ಮದುವೆಯಾಗಲಿದ್ದಾರೆ. ಹೌದು, ಬ್ರೆಜಿಲ್ ನ ಸ್ಥಳೀಯ ಮಾಧ್ಯಮಗಳಲ್ಲಿ ಈ ಸುದ್ದಿ ವರದಿಯಾಗಿದೆ.

Image result for ronaldinho marriage

38 ವರ್ಷದ ಬ್ರೆಜಿಲ್ ನ ಮಾಜಿ ಫುಟ್ಬಾಲ್ ತಾರೆ ರೊನಾಲ್ಡಿನೊ, ತಮ್ಮ ಗರ್ಲ್ ಫ್ರೆಂಡ್ ಗಳಾದ ಪ್ರಿಸ್ಕಿಲಾ ಕೊಯೆಲ್ಹೊ ಹಾಗೂ ಬೀಟ್ರಿಜ್ ಸೌಜಾ ಅವರನ್ನು ಒಟ್ಟಿಗೇ ವಿವಾಹವಾಗಲಿದ್ದಾರೆ. ಕಳೆದ ವರ್ಷದ ಡಿಸೆಂಬರ್ ನಿಂದಲೂ ರೋನಾಲ್ಡಿನೊ, ಗೆಳತಿಯರಾದ ಪ್ರಿಸ್ಕಿಲಾ ಹಾಗೂ ಬೀಟ್ರಿಜ್ ಅವರೊಂದಿಗೆ ಬ್ರೆಜಿಲ್ ರಾಜಧಾನಿ ರಿಯೋ ಡಿ ಜನೈರೋದ ವೈಭವೋಪೇತ ಮ್ಯಾನ್ಷನ್ ನಲ್ಲಿ ವಾಸಿಸುತ್ತಿದ್ದಾರೆ.

Image result for ronaldinho marriage

ಹಲವು ವರ್ಷಗಳಿಂದ ಪ್ರಿಸ್ಕಿಲಾ ಜೊತೆ ರಿಲೇಷನ್ಷಿಪ್ ನಲ್ಲಿದ್ದ ರೊನಾಲ್ಡಿನೊ, 2016 ರಲ್ಲಿ ಬೀಟ್ರಿಜ್ ಅವರನ್ನು ಭೇಟಿಯಾದ ನಂತರ ಆಕೆಯನ್ನೂ ಪ್ರೀತಿಸತೊಡಗಿದರು. ಒಂದೇ ಮನೆಯಲ್ಲಿ ವಾಸಿಸಲು ಯಾವುದೇ ತಕರಾರಿಲ್ಲದೇ ಒಪ್ಪಿಕೊಂಡ ಪ್ರಿಸ್ಕಿಲಾ ಮತ್ತು ಬೀಟ್ರಿಜ್ 2017 ಡಿಸೆಂಬರ್ ನಿಂದಲೂ ರೊನಾಲ್ಡಿನೊ ಜೊತೆಗಿದ್ದಾರೆ.

Image result for ronaldinho marriage

ಎಂದೆಂದೂ ವಿವಾಹ ಬಂಧನದಲ್ಲಿ ಬೀಳುವುದಿಲ್ಲ ಎಂದು ಹೇಳಿಕೊಂಡಿದ್ದ ರೊನಾಲ್ಡಿನೊ, ಮುಂಬರುವ ಆಗಸ್ಟ್ ತಿಂಗಳಲ್ಲಿ ಪ್ರಿಸ್ಕಿಲಾ ಮತ್ತು ಬೀಟ್ರಿಜ್ ಅವರನ್ನು ವರಿಸಲಿದ್ದಾರೆಂಬುದು ಸದ್ಯದ ಹಾಟ್ ನ್ಯೂಸ್ ಆಗಿದೆ.

Leave a Reply

Your email address will not be published.

Social Media Auto Publish Powered By : XYZScripts.com