ಆ ರಾತ್ರಿಯಿಡೀ ಬಿಕ್ಕಿ ಬಿಕ್ಕಿ ಅತ್ತಳಂತೆ ಸನ್ನಿ ಲಿಯೋನ್‌……ಅಸಲಿಗೆ ಆಗಿದ್ದೇನು ?

ಬಾಲಿವುಡ್ನ ಮಾದಕ ನಟಿ, ಮಾಜಿ ನೀಲಿ ತಾರೆ ಸನ್ನಿ ಲಿಯೋನ್‌ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಸನ್ನಿ ತಾವು ಭಾವುಕರಾಗಿರುವ ಫೋಟೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ  ಹಾಕಿದ್ದು, ಅಭಿಮಾನಿಗಳು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.

ತಮ್ಮ ಅಳುವಿಗೆ ಕಾರಣ ಏನೆಂಬುದಕ್ಕೆ ಸನ್ನಿ ಸ್ಪಷ್ಟನೆ ನೀಡಿಲ್ಲ. ಆದರೆ ತನ್ನ ಹಿಂದಿನ ಜೀವನವನ್ನು ನೆನೆಸಿಕೊಂಡು ಸನ್ನಿ ಕಣ್ಣೀರಿಟ್ಟಿದ್ದಾರೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

ನನ್ನ ಮನಸ್ಸು ಈ ರಾತ್ರಿ ಸಾವಿರ ಬಾರಿ ಛಿದ್ರವಾಗಿದೆ. ಈ ರಾತ್ರಿ ಬಹುಶಃ ನಾನು ಸಾವಿರ ಬಾರಿ ಕಣ್ಣೀರಿಟ್ಟಿದ್ದೇನೆ.ನಾನು ಕಾಣೆಯಾಗಿದ್ದೇನೆ, ನೋವುಣ್ಣುತ್ತಿದ್ದೇನೆ. ನೀನು ನನ್ನ ಜೊತೆ ಇರಬೇಕೆಂದು ಬಯಸುತ್ತಿದ್ದೇನೆ. ಈ ಸಮಯ ನನ್ನ ಜೀವನದಲ್ಲಿ ಹಿಂತಿರುಗಿ ಬರುವುದಿಲ್ಲ. ಆದರೆ ನನ್ನ ಮನಸ್ಸಿನಲ್ಲಿ ಸದಾ ಕಾಡುತ್ತೆ ಕರಣ್‍ಜಿತ್ ಕೌರ್ ವೊಹ್ರಾ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಕರಣ್‌ಜಿತ್‌ ಕೌರ್ ಎಂಬುದು ಸನ್ನಿ ಲಿಯೋನ್ ಅವರ ಮೂಲ ಹೆಸರಾಗಿದ್ದು, ತಮ್ಮ ಹಿಂದಿನ ದಿನಗಳನ್ನು ನೆನೆದು ಕಣ್ಣೀರು ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.

Leave a Reply

Your email address will not be published.

Social Media Auto Publish Powered By : XYZScripts.com