ಬುದ್ಧಗಯಾ ಸರಣಿ ಬಾಂಬ್ ಸ್ಫೋಟ : ಐವರು ಉಗ್ರರು ದೋಷಿ ಎಂದು ತೀರ್ಪಿತ್ತ ನ್ಯಾಯಾಲಯ

ಪಾಟ್ನಾ : 2013ರಲ್ಲಿ ನಡೆದ ಬೋಧ್‌ಗಯಾ  ಸರಣಿ ಬಾಂಬ್‌ ಸ್ಫೋಟ ಪ್ರಕರಣ ಸಂಬಂಧ ಬಂಧಿತರಾಗಿದ್ದ ಇಂಡಿಯನ್‌ ಮುಜಾಹಿದ್ದೀನ್‌ ಸಂಘಟನೆಯ ಐವು ಉಗ್ರರನ್ನು ದೋಷಿ ಗಳು ಎಂದು ಎನ್‌ಐಎ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.

ಪ್ರಕರಣ ಸಂಬಂಧ ಆರೋಪಿಗಳ ವಿರುದ್ಧವಿದ್ದ ಸಾಕ್ಷ್ಯಾಧಾರಗಳು  ಸಾಬೀತಾಗಿದ್ದು, ಈ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ  ಮನೋಜ್‌ ಕುಮಾರ್‌ ಸಿನ್ಹಾ ಈ ತೀರ್ಪು ಪ್ರಕಟಿಸಿದ್ದಾರೆ.

ದೋಷಿಗಳನ್ನು ಇಮ್ತಿಯಾಜ್‌ ಅನ್ಸಾರಿ, ಹೈದರಾಲಿ, ಮುಜೀಬ್‌ ಉಲ್ಲಾ, ಒಮರ್‌ ಸಿದ್ಧಿಕಿ ಹಾಗೂ ಅಜರುದ್ದೀನ್ ಖರೇಶ್‌ ಎಂದು ಹೆಸರಿಸಲಾಗಿದೆ.  ಜೊತೆಗೆ ಶಿಕ್ಷೆ ಪ್ರಮಾಣವನ್ನು ಇದೇ 31ರಂದು ಪ್ರಕಟಿಸುವುದಾಗಿ ನ್ಯಾಯಾಲಯ ಹೇಳಿದೆ.
2013ರ ಜುಲೈ 7ರಂದು ಬೋಧ್‌ ಗಯಾ ದೇಗುಲದ ಬಳಿ ಉಗ್ರರು ಸರಣಿ ಬಾಂಬ್ ಸ್ಪೋಟಗೊಳಿಸಿದ್ದರು. ಘಟನೆಯಲ್ಲಿ ಬೌದ್ಧ ಸನ್ಯಾಸಿಗಳು ಸೇರಿದಂತೆ ಹಲವು ಗಾಯಗೊಂಡಿದ್ದರು.

Leave a Reply

Your email address will not be published.