ಬೀದರ್ : ಕ್ಷುಲ್ಲಕ ಕಾರಣಕ್ಕಾಗಿ ಪತಿಯಿಂದ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ..!

ಬೀದರ್ : ಕ್ಷುಲ್ಲಕ ಕಾರಣಕ್ಕಾಗಿ ಪತಿಯೊಬ್ಬ ತನ್ನ ಪತ್ನಿಯ ಮೇಲೆ ಮಾರಾಂತಿಕ ಹಲ್ಲೆ ಮಾಡಿರುವ ಘಟನೆ ಬೀದರ್ ನಗರದ ಮೈಲೂರು ಬಳಿ ನಡೆದಿದೆ. ಪತ್ನಿಯ ಕುತ್ತಿಗೆಗೆ ಚಾಕುವಿನಿಂದ ಇರಿದ  ಬಳಿಕ ಪತಿ ಮಹಾಶಯ ಪರಾರಿಯಾಗಿದ್ದಾನೆ. ಪತ್ನಿ ಮಹಾದೇವಿ ಕುತ್ತಿಗೆ ಚಾಕು ಇರಿದಿದ್ದಲ್ಲದೇ, ಮನೆಯಲ್ಲಿ ಕೂಡಿ ಹಾಕಿ ಪತಿ ಶಿವಕುಮಾರ್ ವಿಕೃತಿ ಮೆರದಿದ್ದಾನೆ.

ಗಾಯಗೊಂಡ ಪತ್ನಿ ಮಹಾದೇವಿಯ ಕಿರುಚಾಟದಿಂದ ಪ್ರಕರಣ ಬೆಳಕಿಗೆ ಬಂದಿದೆ. ರಕ್ತದ ಮಡುವಿನಲ್ಲಿದ್ದ ಮಹಾದೇವಿಯನ್ನು ಸ್ಥಳೀಯ ಜನರು ಸೇರಿಕೊಂಡು ಜಿಲ್ಲಾಸ್ಪತ್ರೆಗೆ ಸೇರಿಸಿದ್ದಾರೆ. ಗಾಂಧಿಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Leave a Reply

Your email address will not be published.

Social Media Auto Publish Powered By : XYZScripts.com