ಸರಿಗಮಪ ಸೀಸನ್‌-14 ಗ್ರ್ಯಾಂಡ್‌ ಫಿನಾಲೆ : ಯಾರಿಗೆ ಒಲಿಯಲಿದ್ದಾಳೆ ವಿಜಯಲಕ್ಷ್ಮಿ…?

ಬೆಂಗಳೂರು : ಕಳೆದ ಐದು ತಿಂಗಳಿನಿಂದ ರಾಜ್ಯದ ಜನರನ್ನು ತಮ್ಮ ಕಂಠದ ಮೂಲಕ ರಂಜಿಸುತ್ತಿದ್ದ ಜೀ ಕನ್ನಡ ವಾಹಿನಿಯ ಸರಿಗಮಪ ಲಿಟಲ್‌ ಚಾಂಪ್ಸ್ ಸೀಸನ್‌ – 14 ರಿಯಾಲಿಟಿ ಶೋ ಕೊನೆಯ ಹಂತಕ್ಕೆ ತಲುಪಿದೆ. ಭಾರೀ ಜನಪ್ರಿಯತೆ ಗಳಿಸಿದ ಈ ಶೋ ಈಗ ಫೈನಲ್‌ ಹಂತಕ್ಕೆ ಬಂದಿದ್ದು, ಗ್ರ್ಯಾಂಡ್‌ ಫಿನಾಲೆಗೆ ಐವರು ಮಕ್ಕಳು ಆಯ್ಕೆಯಾಗಿದ್ದಾರೆ.

ತೇಜಸ್‌ ಶಾಸ್ತ್ರಿ, ವಿಶ್ವ ಪ್ರಸಾದ್‌, ಕೀರ್ತನ, ಅಭಿಜಾತ್‌ ಭಟ್‌ ಹಾಗೂ ಜ್ಞಾನೇಶ್‌ ಟಾಪ್‌ 5 ಗೆ  ಆಯ್ಕೆಯಾಗಿದ್ದಾರೆ. ಇನ್ನು ಈ ಐವರು ಮಕ್ಕಳ ಜೊತೆ ಪುಟಾಣಿ ಪ್ರತಿಭೆ ನೇಹಾಳಿಗೆ ಮೈಲ್ಡ್‌ ಎಂಟ್ರಿ ಎಂದು ಫೈನಲ್‌ನಲ್ಲಿ ಹಾಡುವ ಅವಕಾಶ ನೀಡಲಾಗಿದೆ.

ಇನ್ನು ಎಲ್ಲರೂ ನಿರೀಕ್ಷೆಯಿಂದ ಕಾಯುತ್ತಿರುವ ಸರಿಗಮಪ ಸೀಸನ್ 14 ಕಾರ್ಯಕ್ರಮದ ಫೈನಲ್ ಸಂಚಿಕೆ ಇದೇ ಶನಿವಾರ ಪ್ರಸಾರ ಆಗಲಿದ್ದು, ಕಳೆದ ಬಾರಿಯಂತೆ ಈ ಬಾರಿಯೂ ಲೈವ್ ಆಗಿ ಕಾರ್ಯಕ್ರಮ ಪ್ರಸಾರ ಆಗುತ್ತಿದೆ. ಪ್ರತಿ ಬಾರಿಯಂತೆ ಈ ಬಾರಿಯೂ  ವೀಕ್ಷಕರು ತಮ್ಮ ಮೆಚ್ಚಿನ ಸ್ಪರ್ಧಿಗಳಿಗೆ ವೋಟ್ ಮಾಡಬಹುದಾಗಿದ್ದು, ಮೇ 26ರವರೆಗೆ ವೋಟಿಂಗ್ ಲೈನ್ ತೆರೆದಿರುತ್ತದೆ.

ತಮ್ಮ ವಿಭಿನ್ನ  ನಿರೂಪಣೆಯ ಮೂಲಕ ಜನಮನಗೆದ್ದಿರುವ ಅನುಶ್ರಿ, ಮಹಾಗುರುಗಳಾದ ಹಂಸಲೇಖ, ತೀರ್ಪುಗಾರರಾದ ಅರ್ಜುನ್ಯ ಜನ್ಯ, ವಿಜಯ್‌ ಪ್ರಕಾಶ್‌ ಅವರ ಮಾತು, ಮಕ್ಕಳ ಕಂಠ ಇಷ್ಟು ದಿನ ಜನರನ್ನು ಮೋಡಿ ಮಾಡಿತ್ತು. ಆದರೆ ಈಗ ಕಾರ್ಯಕ್ರಮ ಮುಗಿಯುವ ಹಂತ ತಲುಪಿರುವುದು ಅಭಿಮಾನಿಗಳಲ್ಲಿ ನಿರಾಸೆಯುಂಟುಮಾಡಿದೆ. ಆದರೆ ತಮ್ಮ ನೆಚ್ಚಿನ ಸ್ಪರ್ಧಿಗಳು ಗೆಲ್ಲಲಿ ಎಂದೂ ಹಾರೈಸುತ್ತಿದ್ದಾರೆ.

ಏನೇ ಆಗಲಿ ಈ ಬಾರಿಯ  ಸರಿಗಮಪ ಲಿಟಲ್‌ ಚಾಂಪ್ಸ್‌ ಸೀಸನ್‌ 14 ಪ್ರತೀಬಾರಿಯಂತೆ ಈ ಬಾರಿಯೂ ಭಾರೀ ಕುತೂಹಲ ಕೆರಳಿಸಿದೆ. ಐದು ಮುದ್ದಾದ ಕಂಠಗಳಲ್ಲಿ ಯಾವ ಕಂಠ ಗೆಲುವು ಸಾಧಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.

Leave a Reply

Your email address will not be published.

Social Media Auto Publish Powered By : XYZScripts.com