ಸಿದ್ದರಾಮಯ್ಯ ಪರ ನಿಂತ ಯಡಿಯೂರಪ್ಪ : ಅಪ್ಪ-ಮಕ್ಕಳ ವಿರುದ್ಧ ತೊಡೆ ತಟ್ಟಿದ ಮಾಜಿ ಸಿಎಂ
ಬೆಂಗಳೂರು : ನಾನು ಇನ್ನೆಂದಿಗೂ ಕಾಂಗ್ರೆಸ್ ವಿರುದ್ಧ ಎಲ್ಲಿಯೂ ಮಾತನಾಡುವುದಿಲ್ಲ. ಇನ್ಮುಂದೆ ನಮ್ಮ ಟಾರ್ಗೆಟ್ ಏನಿದ್ದರೂ ಅಪ್ಪ-ಮಕ್ಕಳು ಅಷ್ಟೇ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆಗೂ ಮುನ್ನ ಮಾತನಾಡಿದ ಯಡಿಯೂರಪ್ಪ, ಜೆಡಿಎಸ್ ವಿರುದ್ದ ಹರಿಹಾಯ್ದಿದ್ದಾರೆ. ಈ ಅಪ್ಪ ಮಕ್ಕಳ ಪಕ್ಷ ಎಂದಿಗೂ ಕಾಂಗ್ರೆಸನ್ನು ಉದ್ಧಾರಮಾಡಲು ಬಿಡುವುದಿಲ್ಲ ಎಂದಿದ್ದು, ಪ್ರಣಾಳಿಕೆಯಲ್ಲಿರುವ ಎಲ್ಲಾ ಭರವಸೆ ಈಡೇರಿಸದಿದ್ದರೆ ಪ್ರತಿಭಟನೆ ನಡೆಸುವುದಾಗಿ ಹೇಳಿದ್ದಾರೆ.
ಇನ್ನು 24 ಗಂಟೆಗಳಲ್ಲಿ ಕುಮಾರಸ್ವಾಮಿ ಹೇಳಿದಂತೆ ಸಾಲಮನ್ನಾ ಮಾಡಬೇಕು. ಇಲ್ಲದಿದ್ದರೆ ಸೋಮವಾರ ರಾಜ್ಯದಲ್ಲಿ ಬಂದ್ಗೆ ಕರೆ ನೀಡುವುದಾಗಿ ಎಚ್ಚರಿಸಿದ್ದಾರೆ. ಅಲ್ಲದೆ ಸಿದ್ದರಾಮಯ್ಯನವರಿಗೆ ಮಹಾಮೋಸ ಆಗಿದೆ. ಈ ಅಪ್ಪ ಮಕ್ಕಳ ಪಕ್ಷ ಕಾಂಗ್ರೆಸನ್ನು ಬರಿಗೈಲಿ ಬೀದಿಯಲ್ಲಿ ನಿಲ್ಲಿಸದಿದ್ದರೆ ನನ್ನ ಹೆಸರು ಯಡಿಯೂರಪ್ಪ ಅಲ್ಲ ಎಂದಿದ್ದಾರೆ.