ನಿಮಗೇ ಇಷ್ಟು ಸೊಕ್ಕಿರುವಾಗ, 22 ರಾಜ್ಯಗಳಲ್ಲಿ ಗೆದ್ದು ಅಧಿಕಾರ ಹಿಡಿದಿರುವ ನಮಗಿನ್ನೆಷ್ಟು ಸೊಕ್ಕಿರಬೇಡ….?!!

ಬೆಂಗಳೂರು :  ಇಂದು ಸಿಎಂ ಕುಮಾರಸ್ವಾಮಿ ವಿಶ್ವಾಸಮತ ಯಾಚನೆ ಮಾಡಲಿದ್ದು, ಈ ಹಿನ್ನೆಲೆಯಲ್ಲಿ ಗುರುವಾರ ಬಿಜೆಪಿ ನಾಯಕರು ಖಾಸಗಿ ಹೋಟೆಲ್‌ನಲ್ಲಿ ಸಭೆ ನಡೆಸಿದ್ದಾರೆ.

ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿರುವ ಬಿಜೆಪಿ ನಾಯಕ ಸಿ.ಟಿ ರವಿ, ಕುಮಾರಸ್ವಾಮಿ ತಮ್ಮನ್ನು ತಾವು ಸಾಂದರ್ಭಿಕ ಶಿಶು ಎಂದು ಹೇಳಿಕೊಂಡಿದ್ದಕ್ಕೆ ತಿರುಗೇಟು ನೀಡಿದ್ದಾರೆ.  ಸಾಂದರ್ಭಿಕ ಶಿಶುವಿಗೇ ಅಷ್ಟು ಸೊಕ್ಕಿರಬೇಕಾದರೆ 22 ರಾಜ್ಯಗಳಲ್ಲಿ ಗೆದ್ದು ಅಧಿಕಾರ ಹಿಡಿದಿರುವ ನಮಗಿನ್ನೆಷ್ಟು ಸೊಕ್ಕಿರಬೇಕು ಎಂದಿದ್ದಾರೆ.

ಅಲ್ಲದೆ ಇಷ್ಟೊಂದು ಸೊಕ್ಕು ಒಳ್ಳೆಯದಲ್ಲ. ವಿಚಿತ್ರ ಮಗುವನ್ನು ನೋಡಲು ಅಷ್ಟು ಜನ ಸೇರಿದ್ದರು. ಮೈತ್ರಿ ಸರ್ಕಾರ ಎಂಬುದೇ ವಿಚಿತ್ರ ಮಗು. ಇಂತಹ ವಿಚಿತ್ರ ಮಗುವನ್ನು ಯಾರೂ ಪ್ರೀತಿ ಮಾಡಲು ಸಾಧ್ಯವಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com