ನೂತನ ಸಿಎಂ ಎಚ್‌.ಡಿ ಕುಮಾರಸ್ವಾಮಿಗೆ ಶುರುವಾಯ್ತು ಹೊಸ ತಲೆನೋವು…ಏನದು ?

ಬೆಂಗಳೂರು : ಕಾಂಗ್ರೆಸ್‌ , ಜೆಡಿಎಸ್‌  ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದರೂ ಅದ್ಯಾಕೋ ಗೊಂದಲಗಳು ಮಾತ್ರ ಬಗೆಹರಿಯುವಂತೆ ಕಾಣುತ್ತಿಲ್ಲ. ಎಚ್‌ಡಿಕೆ ವಿಶ್ವಾಸ ಮತವನ್ನೇನೋ ಯಾಚನೆ ಮಾಡಿದ್ದಾಗಿದೆ. ಆದರೆ ಈಗ ಸಚಿವ ಸ್ಥಾನ ಹಂಚಿಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಎಲ್ಲಾ ಸಮುದಾಯದವರೂ ಸಚಿವ ಸ್ಥಾನಕ್ಕಾಗಿ ಬೇಡಿಕೆ ಇಟ್ಟಿದ್ದು,  ರಾಜ್ಯದಲ್ಲಿ  ಸುಮಾರು 50 ಲಕ್ಷಕ್ಕೂ ಅಧಿಕ ಮಂದಿ ಸಂಖ್ಯಾಬಲವಿರುವ ಮರಾಠ ಸಮುದಾಯದವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯ ಕೇಳಿಬರುತ್ತಿದೆ. ಅಲ್ಲದೆ ಈ ಸಂಬಂಧ ಮರಾಟ ಸಮುದಾಯ ಹೈಕಮಾಂಡ್‌ಗೆ ಪತ್ರವನ್ನೂ ಬರೆದಿದೆ.

ಮರಾಠ ಸಮುದಾಯದ ಅಂಜಲಿ ನಿಂಬಾಳ್ಕರ್ ಅವರಿಗೆ ಸಚಿವ ಸ್ಥಾನ ತಪ್ಪಿಸುವ ಕೆಲಸ ನಡೆದಿದ್ದು ಕಾಗವಾಡದಿಂದ ಗೆದ್ದಿರುವ ಕಾಂಗ್ರೆಸ್ ನ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತ ಶ್ರೀಮಂತ ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡಲೇಬೇಕೆಂದು ಮರಾಠ ಸಮುದಾಯ ಪಟ್ಟು ಹಿಡಿದು ಪತ್ರ ಬರೆದಿದೆ.

ಸರ್ಕಾರಕ್ಕೆ ಬರೆದಿರುವ ಪತ್ರದಲ್ಲಿ ಸಚಿವ ಸ್ಥಾನ ಸಿಗದಿದ್ರೆ ಮರಾಠ ಸಮುದಾಯದ ಬಂಡಾಯವೇಳಲಿದೆ. ಇದನ್ನು ಶಮನ ಮಾಡದಿದ್ದಲ್ಲಿ ಮೊದಲಿನಿಂದ್ಲೂ ಕಾಂಗ್ರೆಸನ್ನು ಬೆಂಬಲಿಸ್ತಾ ಬಂದಿರುವ ಮರಾಠ ಸಮುದಾಯಕ್ಕೆ ವಂಚನೆ ಮಾಡಿದಂತಾಗುತ್ತದೆ. ಇದರ ಪರಿಣಾಮವನ್ನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಎದುರಿಸಬೇಕಾಗ್ತದೆ ಎಂದು ಎಚ್ಚರಿಸಿದೆ.

ಈ ಹಿನ್ನಲೆಯಲ್ಲಿ ಮರಾಠ ಸಮುದಾಯದ ಮುಖಂಡರ ಮಹತ್ವದ ಸಭೆ ಕೂಡ ನಡೆದಿದ್ದು ಶ್ರೀಮಂತ ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡಲೇಬೇಕೆಂದು ಒತ್ತಾಯಿಸಿದ್ದಾರೆ. ಇದನ್ನು ಮನವಿ ಎಂದು ಬೇಕಾದ್ರೂ ತಿಳಿದುಕೊಳ್ಳಿ..ಅಥವಾ ಬೆದರಿಕೆ ಎಂದಾದ್ರೂ ಪರಿಭಾವಿಸಿ ಎಂದು ಮರಾಠ ಸಮುದಾಯದ ಮುಖಂಡರು ಸ್ಪಷ್ಟವಾಗಿ  ತಿಳಿಸಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com