ಕುಮಾರಸ್ವಾಮಿ ಸಿಎಂ ಆದ ಬಳಿಕ ಸಾಫ್ಟಾದ ಜಮೀರ್‌ ಅಹ್ಮದ್‌…..HDK ಬಗ್ಗೆ ಅದೆಂಥಾ ಮಾತಾಡಿದ್ರು ?

ಬೆಂಗಳೂರು : ಚುನಾವಣೆಗೂ ಮುನ್ನ ಸಿಎಂ ಕುಮಾರಸ್ವಾಮಿ ವಿರುದ್ಧ ಕಿಡಿಕಾರುತ್ತಿದ್ದ ಶಾಸಕ ಜಮೀರ್ ಅಹ್ಮದ್‌ ಈಗ ಸಾಫ್ಟ್ ಆಗಿದ್ದಾರೆ.

ಚುನಾವಣಾ ಪ್ರಚಾರದ ಮೇಲೆ ತಮ್ಮ ಸಮುದಾಯದ ಮುಖಂಡರ ಬಳಿ ಕಾಂಗ್ರೆಸನ್ನು ಗೆಲ್ಲಿಸಿ. ಸಿದ್ದರಾಮಯ್ಯ ಮುಖ್ಯಮಂತ್ರಿಯಾದರೆ ನಾನು ಮಂತ್ರಿಯಾಗುತ್ತೇನೆ. ಕುಮಾರಸ್ವಾಮಿ ನಾಲಾಯಕ್‌, ಅಯೋಗ್ಯ ಎಂತೆಲ್ಲ ಬೈದಿದ್ದ ಜಮೀರ್ ಅಹ್ಮದ್‌ ಈಗ ಎಚ್‌ಡಿಕೆ ಪರ ಬ್ಯಾಟಿಂಗ್ ಮಾಡಿದ್ದಾರೆ.

ನನ್ನ ಮತ್ತು ಕುಮಾರಸ್ವಾಮಿ ನಡುವೆ ದೋಸ್ತಿ ಚೆನ್ನಾಗಿದೆ ಎಂದು ಹೇಳಿಕೆ ನೀಡಿರುವ ಜಮೀರ್‌, ಆದರೆ ಹಿಂದಿನಷ್ಟು ಒಡನಾಟ ಇಲ್ಲ. ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಸಚಿವ ಸ್ಥಾನಕ್ಕೆ ನಾನು ಯಾರ ಬಳಿಯೂ ಲಾಬಿ ನಡೆಸಲ್ಲ.  ಪಕ್ಷ ತೀರ್ಮಾನಿಸಿದರೇ ಸಚಿವ ಸ್ಥಾನ ಸ್ವೀಕರಿಸಲು ಸಿದ್ದ.  ಪಕ್ಷದ ತೀರ್ಮಾನಕ್ಕೆ ನಾನು ಬದ್ಧನಾಗಿದ್ದೇನೆ ಎಂದಿದ್ದಾರೆ.

Leave a Reply

Your email address will not be published.