ಕರ್ನಾಟಕದಲ್ಲಿ ಆರಂಭವಾಯ್ತು ಕುಮಾರಪರ್ವ : ವಿಶ್ವಾಸ ಗೆದ್ದ ಸಮ್ಮಿಶ್ರ ಸರ್ಕಾರ

ಬೆಂಗಳೂರು : ವಿಶ್ವಾಸಮತದ ಅಗ್ನಿ ಪರೀಕ್ಷೆಯಲ್ಲಿ ಸಿಎಂ ಕುಮಾರಸ್ವಾಮಿ ಕೊನೆಗೂ ಪಾಸಾಗಿದ್ದಾರೆ. ವಿಧಾನಸಭೆಯಲ್ಲಿಂದು ಕುಮಾರಸ್ವಾಮಿ ವಿಶ್ವಾಸಮತ ಯಾಚನೆ ಮಾಡಿದ್ದು, ಕಾಂಗ್ರೆಸ್‌ ಶಾಸಕರೆಲ್ಲರೂ ಕುಮಾರಸ್ವಾಮಿಗೆ ಬೆಂಬಲ ಸೂಚಿಸಿದ್ದಾರೆ. ಈ ಮೂಲಕ ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿಯಾಗಿ ಮುಂದುವರಿಯುವುದು ಸ್ಪಷ್ಟವಾದಂತಾಗಿದೆ.

ವಿಧಾನಸಭೆಯಲ್ಲಿಂದು ಮಾಜಿ ಸಿಎಂ ಯಡಿಯೂರಪ್ಪ  ಭಾಷಣ ಮಾಡುತ್ತಿದ್ದ ವೇಳೆ ಕುಮಾರಸ್ವಾಮಿ ಮದ್ಯ ಪ್ರವೇಶ ಮಾಡಿದ್ದರು. ಈ ವೇಳೆ ಯಡಿಯೂರಪ್ಪ  ನೇತೃತ್ವದಲ್ಲಿ ಎಲ್ಲಾ ಶಾಸಕರೂ ಸಭಾತ್ಯಾಗ ಮಾಡಿ, ಬಹುಮತ ಸಾಬೀತಿಗೆ ಅನುವು ಮಾಡಿಕೊಟ್ಟರು.

ಒಟ್ಟಾರೆಯಾಗಿ ಮೇ 12ರಿಂದ ಇದುವರೆಗೆ ನಡೆದಿದ್ದ ಎಲ್ಲಾ ರಾಜಕೀಯ ಹೈಡ್ರಾಮಾಗಳಿಗೂ ಇಂದು ತೆರೆ ಬಿದ್ದಿದ್ದು, ಬಿಜೆಪಿ ಏನೂ ಮಾಡಲಾಗದ ಪರಿಸ್ಥಿತಿಯಲ್ಲಿ ಸೋತು ಸಭಾತ್ಯಾಗ ಮಾಡಿದೆ.

 

 

Leave a Reply

Your email address will not be published.

Social Media Auto Publish Powered By : XYZScripts.com