ರೈತರ ಸಾಲಮನ್ನಾ ಮಾಡೇ ಮಾಡ್ತೀನಿ : ವಿಧಾನಸಭೆಯಲ್ಲಿ ಕುಮಾರಸ್ವಾಮಿ ಘೋಷಣೆ

ಬೆಂಗಳೂರು : ಚುನಾವಣೆಗೂ ಮುನ್ನ ಮಾತು ನೀಡಿದಂತೆ ರೈತರು ಖಾಸಗಿ ಬ್ಯಾಂಕ್​, ಸಹಕಾರಿ ಬ್ಯಾಂಕ್​ ಮತ್ತು ಗ್ರಾಮೀಣ ಬ್ಯಾಂಕುಗಳಲ್ಲಿ ಮಾಡಿರುವ ಸಾಲವನ್ನು ಮನ್ನಾ ಮಾಡುತ್ತೇನೆ ಎಂದು ವಿಧಾನಸಭೆಯಲ್ಲಿ ಸಿಎಂ ಕುಮಾರಸ್ವಾಮಿ  ಹೇಳಿದ್ದಾರೆ.

ವಿಶ್ವಾಸ ಮತಕ್ಕೂ ಮುನ್ನ ಭಾಷಣ ಮಾಡಿದ ಕುಮಾರಸ್ವಾಮಿ, ಈಗ ಇರುವುದು ನನ್ನ ಸ್ವತಂತ್ರ ಸರ್ಕಾರ ಅಲ್ಲ. ಕಾಂಗ್ರೆಸ್​ ಕೂಡ ತನ್ನ ಪ್ರಣಾಳಿಕೆಯಲ್ಲಿ ಹಲವು ವಿಚಾರಗಳನ್ನು ಜನರ ಮುಂದಿಟ್ಟಿದ್ದಾರೆ. ಹಾಗೆಯೇ ನಾವು ಕೂಡ ನಮ್ಮ ಪ್ರಣಾಳಿಕೆಯಲ್ಲಿ ಹಲವು ವಿಷಯಗಳನ್ನು ಜನರ ಮುಂದಿಟ್ಟಿದ್ದೇವೆ. ಆದ್ದರಿಂದ ಕಾಂಗ್ರೆಸ್​ ನಾಯಕರನ್ನು ಕೂಡ ವಿಶ್ವಾಸಕ್ಕೆ ತೆಗೆದುಕೊಂಡು ಸಾಲಮನ್ನಾ ಮಾಡುವುದಾಗಿ ಹೇಳಿದ್ದಾರೆ.

ಬಿಜೆಪಿಯವರು ರೈತರ ಪರವಾಗಿ ಸಾಲಮನ್ನಾ ಮಾಡದೇ ಇದ್ದರೆ ರಾಜ್ಯಾಧ್ಯಂತ ಹೋರಾಟ ಮಾಡುವುದಾಗಿ ಹೇಳಿದ್ದಾರೆ. ಆದರೆ ನಾನು ಅವರಿಗೆ ಆ ಕಷ್ಟವನ್ನು ನೀಡಲ್ಲ.  ಸಾಲಮನ್ನಾ ಮಾಡುತ್ತೇನೆ. ನನಗೆ ಅಧಿಕಾರ ನೀಡದೇ ಇದ್ದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ. ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ನಾನು ರಾಜ್ಯದ ಜನರ ಸಮಸ್ಯೆಯನ್ನು ನೀಗಿಸುವುದಕ್ಕಾಗಿ ನಾನು ಇನ್ನು ಹೆಚ್ಚುಕಾಲ ಬದುಕಬೇಕು ಎಂದು ಹೇಳಿದ್ದೆ . ನಮ್ಮ ಸರ್ಕಾರ ಐದು ವರ್ಷ ಪೂರೈಸಲಿದೆ. ಅದನ್ನು ಮಾಜಿ ತೋರಿಸುತ್ತೇವೆ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com