ನಮ್ಮದು ಜವಾಬ್ದಾರಿಯುತ ಸರ್ಕಾರ, ಬಿಜೆಪಿ ಹೇಳಿದಂತೆಲ್ಲ ಕೇಳಕ್ಕಾಗಲ್ಲ ಎಂದ ಡಿಕೆಶಿ…

ಬೆಂಗಳೂರು : ಇಂದು ಮುಖ್ಯಮಂತ್ರಿ  ಕುಮಾರಸ್ವಾಮಿ ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸಿದ್ದು, ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಿದೆ.

ಅಧಿವೇಶನದ ಬಳಿಕ ಮಾತನಾಡಿದ ಕಾಂಗ್ರೆಸ್ ನಾಯಕ ಡಿ.ಕೆ ಶಿವಕುಮಾರ್, ಯಡಿಯೂರಪ್ಪನವರು ಸಾಲಮನ್ನಾ ಮಾಡಿ, ಇಲ್ಲದಿದ್ದರೆ ಸೋಮವಾರ ಬಂದ್‌ಗೆ ಕರೆ ನೀಡುತ್ತೇವೆ ಎಂದಿದ್ದಾರೆ. ಸುಮ್ಮನೇ ಜನರ ದುಡ್ಡನ್ನು ಪೋಲು ಮಾಡಲು ನಮಗೆ ಇಷ್ಟವಿಲ್ಲ. ಬಂದ್ ವೇಳೆ ಏನಾದರೂ ಅಹಿತಕರ ಘಟನೆ ಸಂಭವಿಸಿದರೆ ಅದಕ್ಕೆ ಬಿಜೆಪಿಯೇ ಹೊಣೆ. ಬಿಜೆಪಿಗರಿಗೆ ನಮ್ಮನ್ನು ಬ್ಲಾಕ್ ಮೇಲ್ ಮಾಡಲು ಅಥವಾ ಬಲವಂತ ಮಾಡಲು ಅವಕಾಶವಿಲ್ಲ. ನಮ್ಮದು ಜವಾಬ್ದಾರಿಯುತ ಸರಕಾರ, ನಮಗೆ ಬಿಜೆಪಿಯವರು ಹೇಳಿದಂತೆ ಕೇಳಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜೊತೆಗೆ ಕುಮಾರಸ್ವಾಮಿಯವರ ಸರ್ಕಾರಕ್ಕೆ ನಾವು ಸಂಪೂರ್ಣ ಬೆಂಬಲ ನೀಡುತ್ತೇವೆ. ಐದು ವರ್ಷ ಆಡಳಿತ ಮಾಡುವುದು ಶತಸಿದ್ಧ ಎಂದಿದ್ದಾರೆ.

Leave a Reply

Your email address will not be published.