ಜನರಿಗೆ ಬೇಕಾಗಿಲ್ಲ…ರಾಜ್ಯ ನಾಯಕರಿಗೆ ಲೆಕ್ಕಕ್ಕಿಲ್ಲ…ರಾಜನಂತಿದ್ದ ಸಿದ್ದರಾಮಯ್ಯ ಇಷ್ಟು ಬೇಗ ಮೂಲೆಗುಂಪಾದರಾ..?

ಐದು ವರ್ಷ ಕರ್ನಾಟಕ ರಾಜ್ಯದಲ್ಲಿ ಸಮಾಜಮುಖಿ ಚಿಂತನೆಗಳಿಂದ  ಆಡಳಿತ ಮಾಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಇಂದು ಮೂಲೆಗುಂಪಾಗಿದ್ದಾರೆ.

ಇಷ್ಟು ದಿನ ರಾಜನಂತೆ ಎಲ್ಲರೆದು ತನ್ನ ಕೆಲಸದ ಬಗ್ಗೆ, ತನ್ನ ಸರ್ಕಾರ ಜಾರಿಗೆ ತಂದ ಯೋಜನೆಗಳ ಬಗ್ಗೆ ಗತ್ತಿನಿಂದ ಹೇಳಿಕೊಂಡು ತಿರುಗುತ್ತಿದ್ದ ಸಿದ್ದರಾಮಯ್ಯ ಈಗ ಹೀನಾಯ ಸ್ಥಿತಿಗೆ ತಲುಪಿರುವುದು ಮಾತ್ರ ಸತ್ಯ. ಚುನಾವಣೆ ನಡೆದು ಫಲಿತಾಂಶ ಹೊರಬಂದಾಗಿನಿಂದ ಸಿದ್ದರಾಮಯ್ಯ ಮಂಕಾಗಿದ್ದಾರೆ. ಇಷ್ಟು ದಿನ ಎಲ್ಲರೆದುರು ಎದೆಯುಬ್ಬಿಸಿ ನಿಲ್ಲುತ್ತಿದ್ದ ಸಿದ್ದರಾಮಯ್ಯ ಈಗ ಕೈಕಟ್ಟಿ ನಿಲ್ಲುವಂತಾಗಿದೆ.

ಕಾಂಗ್ರೆಸ್‌ ಪಕ್ಷದಿಂದ ಗೆದ್ದು ಮುಖ್ಯಮಂತ್ರಿಯಾಗಿ, ಜನಪರ ಆಡಳಿತ ನೀಡಿ, ಚಿಂತಕರಿಂದ ಉತ್ತಮ ನಾಯಕ ಎಂಬ ಹೆಸರು ಪಡೆದಿದ್ದ, ಅನ್ನಭಾಗ್ಯ, ಇಂದಿರಾ ಕ್ಯಾಂಟೀನ್‌ ಯೋಜನೆ ಜಾರಿಗೆ ತಂದು ಬಡವರ ಹಸಿವು ನೀಗಿಸಿದ್ದ, ರೈತರಿಗಾಗಿ ಸಾಲಮನ್ನಾ ಮಾಡಿದ್ದ, ಬಡ ಮಕ್ಕಳಿಗೆ ಊಟ, ಹಾಲು ನೀಡಿದ್ದ ಸಿದ್ದರಾಮಯ್ಯ ಇಂದು ಯಾರಿಗೂ ಬೇಡವಾಗಿದ್ದಾರೆ.

ಪಕ್ಷದ ನಾಯಕರೇ ಸಿದ್ದರಾಮಯ್ಯ ಅವರನ್ನು ಲೆಕ್ಕಕ್ಕಿಲ್ಲದಂತೆ ನಡೆಸಿಕೊಳ್ಳುತ್ತಿದ್ದಾರೆ. ಇನ್ನು ಹೈ ಕಮಾಂಡ್‌ ಸಹ ಸಿದ್ದರಾಮಯ್ಯರನ್ನು, ಅವರು ಜಾರಿಗೆ ತಂದ ಸಾಧನೆಗಳನ್ನು ಮರೆತಂತೆ ಕಾಣುತ್ತಿದೆ. ಏನೇ ಆದರೂ ಅಭಿಮಾನಿಗಳ ಮನಸ್ಸಲ್ಲಿ ಸಿದ್ದರಾಮಯ್ಯ ಸರ್ಕಾರದ ಸಾಧನೆ ಮಾತ್ರ ಮಾಸಲು ಸಾಧ್ಯವಿಲ್ಲ.

ಕಾಂಗ್ರೆಸ್‌ ಪಕ್ಷದಿಂದ ಗೆದ್ದು ಬಂದಿದ್ದ ಸಿದ್ದರಾಮಯ್ಯನವರಿಗೆ ಪಕ್ಷದಲ್ಲಿ ಸ್ಥಾನ ನೀಡಬೇಕು ಎಂದು ಸೋಶಿಯಲ್‌ ಮೀಡಿಯಾದಲ್ಲಿ ಮಾತುಗಳು ಕೇಳಿಬರುತ್ತಿವೆ. ಅಲ್ಲದೆ ಸಿದ್ದರಾಮಯ್ಯನವರಿಗೆ ಸಚಿವ ಸ್ಥಾನ ನೀಡುವಂತೆಯೂ ಅಭಿಮಾನಿಗಳು ಆಗ್ರಹಿಸುತ್ತಿದ್ದಾರೆ. ಮೈತ್ರಿ ಸರ್ಕಾರದಲ್ಲಿ ಸಿದ್ದರಾಮಯ್ಯನವರನ್ನು ಇನ್ನಾದರೂ ಲೆಕ್ಕಕ್ಕೆ ತೆಗೆದುಕೊಳ್ಳಲಿ. ಅವರ ಜನಪರ ಕಾರ್ಯಗಳನ್ನು ಎಚ್‌ಡಿಕೆ ಸರ್ಕಾರ ಮುಂದುವರಿಸಿಕೊಂಡು ಹೋಗಲಿ ಎಂದು ಸೋಶಿಯಲ್‌ ಮೀಡಿಯಾದಲ್ಲಿ ಅಭಿಮಾನಿಗಳು ಮನವಿ ಮಾಡುತ್ತಿದ್ದಾರೆ. ಅಭಿಮಾನಿಗಳ ಮನವಿಗೆ ನಾಯಕರ ಒಪ್ಪುತ್ತಾರಾ, ಸಿದ್ದರಾಮಯ್ಯನವರಿಗೆ ಸಚಿವ ಸ್ಥಾನ ಸಿಗುತ್ತಾ ಎಂಬುದು ಸದ್ಯದಲ್ಲೇ ತಿಳಿಯಲಿದೆ.

15 thoughts on “ಜನರಿಗೆ ಬೇಕಾಗಿಲ್ಲ…ರಾಜ್ಯ ನಾಯಕರಿಗೆ ಲೆಕ್ಕಕ್ಕಿಲ್ಲ…ರಾಜನಂತಿದ್ದ ಸಿದ್ದರಾಮಯ್ಯ ಇಷ್ಟು ಬೇಗ ಮೂಲೆಗುಂಪಾದರಾ..?

Leave a Reply

Your email address will not be published.

Social Media Auto Publish Powered By : XYZScripts.com