ಮೋದಿಗೆ ಕೊಹ್ಲಿಯ ಫಿಟ್ನೆಸ್-ಚಾಲೆಂಜ್ : ಟ್ವಿಟರ್ ನಲ್ಲಿ ಸವಾಲು ಸ್ವೀಕರಿಸಿದ ಪ್ರಧಾನಿ..

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಫಿಟ್ನೆಸ್ ಕುರಿತು ಅತ್ಯಂತ ಕಾಳಜಿ ವಹಿಸುತ್ತಾರೆಂಬುದು ಅಭಿಮಾನಿಗಳಿಗೆ ಗೊತ್ತಿರುವ ವಿಷಯ. ವಿರಾಟ್ ಕೊಹ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಫಿಟ್ನೆಸ್ ಚಾಲೆಂಜ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣ ಟ್ವಿಟರಿನಲ್ಲಿ ಟ್ವೀಟ್ ಮಾಡಿರುವ ವಿರಾಟ್, ‘ಹಮ್ ಫಿಟ್ ತೋ ಇಂಡಿಯಾ ಫಿಟ್’ ಎಂಬ ಹ್ಯಾಷ್ ಟ್ಯಾಗ್ ಬಳಸಿ, ಪತ್ನಿ ಅನುಷ್ಕಾ ಶರ್ಮಾ, ಧೋನಿ ಹಾಗೂ ಮೋದಿಯವರಿಗೆ ಫಿಟ್ನೆಸ್ ಚಾಲೆಂಜ್ ಮಾಡಿದ್ದಾರೆ.

ಕೊಹ್ಲಿ ಹಾಕಿರುವ ಸವಾಲನ್ನು ನರೇಂದ್ರ ಮೋದಿ ಸ್ವೀಕರಿಸಿದ್ದಾರೆ. ಟ್ವೀಟ್ ಮಾಡಿ ಉತ್ತರಿಸಿರುವ ಮೋದಿ, ‘ ನಾನು ನಿಮ್ಮ ಚಾಲೆಂಜ್ ಸ್ವೀಕರಿಸಿದ್ದೇನೆ ವಿರಾಟ್. ಶೀಘ್ರವೇ ನನ್ನ ಫಿಟ್ನೆಸ್ ಚಾಲೆಂಜ್ ವಿಡಿಯೋ ಅಪ್ಲೋಡ್ ಮಾಡಲಿದ್ದೇನೆ ‘ ಎಂದಿದ್ದಾರೆ.

ಇದಕ್ಕೂ ಮುನ್ನ ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ ಸಿಂಗ್ ರಾಠೋಡ್ ವಿರಾಟ್ ಕೊಹ್ಲಿಗೆ ಫಿಟ್ನೆಸ್ ಚಾಲೆಂಜ್ ಮಾಡಿದ್ದರು.

Leave a Reply

Your email address will not be published.