ಮೋದಿ ಮನಸ್ಸು ಮಾಡಿದ್ರೆ ಲೀ.ಪೆಟ್ರೋಲ್‌ ಬೆಲೆಯನ್ನು 25ರೂ ಇಳಿಸಬಹುದು, ಆದ್ರೆ ಅವರು ಮಾಡಲ್ಲ : ಪಿ.ಚಿದಂಬರಂ

ದೆಹಲಿ : ದೇಶಾದ್ಯಂತ ದಿನೇ ದಿನೇ ಪೆಟ್ರೋಲ್‌ ದರ ಏರಿಕೆಯಾಗುತ್ತಿದ್ದು, ಈ ಬಗ್ಗೆ ಜನ ಅಸಮಾಧಾನ ಹೊರಹಾಕುತ್ತಿದ್ದಾರೆ. ಈ ಮಧ್ಯೆ ಕಾಂಗ್ರೆಸ್‌ ನಾಯಕ, ಕೇಂದ್ರ ಮಾಜಿ ಸಚಿವ ಪಿ.ಚಿದಂಬರಂ ಸಹ ತಮ್ಮ ಅಸಮಾಧಾನವನ್ನು ಹೊರಹಾಕಿದ್ದು, ಕೇಂದ್ರ ಸರ್ಕಾರಕ್ಕೆ ಪ್ರತೀ ಲೀ.ಗೆ 25ರೂ ಲಾಭ ಬಂದರೂ 25 ಪೈಸೆಯಷ್ಟು ದರ ಇಳಿಕೆ ಮಾಡುವ ಮನಸ್ಸಿಲ್ಲ. ಜನರ ಸಂಕಷ್ಟ ಮೋದಿಗೆ ಅರ್ಥವಾಗುತ್ತಿಲ್ಲ. ಮೋದಿ ಸರ್ಕಾರ ಇಚ್ಛಿಸಿದರೆ ಪೆಟ್ರೋಲ್‌ ದರ ಲೀಟರ್‌ಗೆ 25ರೂ ಕಡಿಮೆ ಮಾಡಬಹುದು. ಆದರೆ ಅವರಿಗೆ ಆ ರೀತಿ ಮಾಡುವ ಮನಸ್ಸಿಲ್ಲ ಎಂದಿದ್ದಾರೆ.

ಈ ಕುರಿತು ಚಿದಂಬರಂ ಸರಣಿ ಟ್ವೀಟ್ ಮಾಡಿದ್ದು, ಪ್ರತಿ ಲೀಟರ್ ಪೆಟ್ರೋಲ್‍ಗೆ 25 ರೂ.ಗಳಂತೆ ಕೇಂದ್ರ ಸರ್ಕಾರಕ್ಕೆ ಭರ್ಜರಿ ಹಣ ಸಂದಾಯವಾಗುತ್ತಿದೆ. ಗ್ರಾಹಕರ ಪರಿಶ್ರಮದ ಹಣ ನಿರಾಯಾಸವಾಗಿ ಕೇಂದ್ರದ ಪಾಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಕಚ್ಚಾ ತೈಲ ಬೆಲೆಯ ಕುಸಿತದಿಂದಾಗಿ ಕೇಂದ್ರ ಸರ್ಕಾರ ಪ್ರತಿ ಲೀಟರ್ ಪೆಟ್ರೋಲ್ ಮೇಲೆ 15 ರೂ.ಗಳನ್ನು ಉಳಿಸುತ್ತಿದೆ. ಇನ್ನೊಂದೆಡೆ ಲೀಟರ್ ಒಂದಕ್ಕೆ 10 ರೂ.ಗಳ ಹೆಚ್ಚುವರಿ ತೆರಿಗೆ ಹೊರೆ ಹಾಕುತ್ತಿದೆ. ಇದರಿಂದ ಜನ ಪರದಾಡುತ್ತಿದ್ದಾರೆ. ಇದ್ಯಾವುದೂ ಮೋದಿ ಕಣ್ಣಿಗೆ ಕಾಣುತ್ತಿಲ್ಲ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com