ಕುಮಾರಸ್ವಾಮಿ ಅಪ್ಪಟ ಅಭಿಮಾನಿಯನ್ನು ಭೇಟಿ ಮಾಡಿದ ಸಿಎಂ ಪುತ್ರ ನಿಖಿಲ್..

ರಾಜ್ಯದ ನೂತನ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರ ಅಪ್ಪಟ ಅಭಿಮಾನಿಯನ್ನು ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ ಭೇಟಿ ಮಾಡಿದ್ದಾರೆ. ಹೆಚ್‌ಡಿಕೆ ಅಭಿಮಾನಿ ರಾಮಕೃಷ್ಣಗೌಡರನ್ನು ಸಿಎಂ ಪುತ್ರ ನಿಖಿಲ್ ಭೇಟಿಯಾಗಿದ್ದಾರೆ. ರಾಮಕೃಷ್ಣ ಗೌಡ ಕುಮಾರಸ್ವಾಮಿಗಾಗಿ 11 ವರ್ಷದಿಂದ ಗಡ್ಡ ಕೂದಲು ತೆಗೆಸದೆ ಹರಕೆ ಹೊತ್ತಿದ್ದರು. ಹೆಚ್‌ಡಿಕೆ ಮತ್ತೆ ಸಿಎಂ ಆಗುವವರೆಗೂ ಗಡ್ಡ, ತಲೆಗೂದಲು ತೆಗೆಸುವುದಿಲ್ಲ ಎಂದು ರಾಮಕೃಷ್ಣ ಗೌಡ ಹರಕೆ ಕಟ್ಟಿದ್ದರು.

ಮೈಸೂರಿನ ಕೆ.ಆರ್.ನಗರ ತಾಲ್ಲೂಕಿನ ಮೇಲೂರು ಗ್ರಾಮದ ನಿವಾಸಿಯಾಗಿರುವ ರಾಮಕೃಷ್ಣಗೌಡ ನಿನ್ನೆ ಖಾಸಗಿ ಹೊಟೇಲ್‌ಗೆ ಕರೆಸಿಕೊಂಡ ನಿಖಿಲ್ ಕುಮಾರಸ್ವಾಮಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ತಂದೆಯವರಿಗೆ ಹರಕೆ‌ಹೊತ್ತಿದ್ದಕ್ಕೆ ನಿಖಿಲ್ ಕುಮಾರಸ್ವಾಮಿ ಧನ್ಯವಾದ ತಿಳಿಸಿದ್ದಾರೆ.

ರಾಮಕೃಷ್ಣಗೌಡ ಅವರ ಪುತ್ರ ಗೌತಮ್‌ ಅವರಿಗೂ ನಿಖಿಲ್ ಧನ್ಯವಾದ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ತಂದೆಯವರನ್ನ ಭೇಟಿ ಮಾಡಿಸುವುದಾಗಿ ನಿಖಿಲ್ ಭರವಸೆ ನೀಡಿದ್ದಾರೆ. ನಿನ್ನೆಯೇ ಕಾಶಿಗೆ ತೆರಳಿದ್ದ ರಾಮಕೃಷ್ಣ ಗೌಡರು ಇಂದು ಕುಮಾರಸ್ವಾಮಿಗಾಗಿ ಹೊತ್ತಿದ್ದ ಹರಕೆಗೆ ಮುಡಿ ಮಾಡಿಸಲಿದ್ದಾರೆ. ‌

Leave a Reply

Your email address will not be published.

Social Media Auto Publish Powered By : XYZScripts.com