ನಮ್ಮಪ್ಪನಾಣೆ ಈ ಸರ್ಕಾರ ಇನ್ನು ಆರು ತಿಂಗಳೂ ಇರೋದಿಲ್ಲ : ವರ್ತೂರು ಪ್ರಕಾಶ್‌

ಕೋಲಾರ : ನಮ್ಮಪ್ಪನಾಣೆ ಈ ಸರ್ಕಾರ ಆರು ತಿಂಗಳೂ ಇರಲ್ಲ. ಒಂದು ವರ್ಷದಲ್ಲಿ ಮತ್ತೆ ನಾನು ಶಾಸಕನಾಗುತ್ತೇನೆ ಎಂದು ಕೋಲಾರದ ಮಾಜಿ ಶಾಸಕ ವರ್ತೂರು ಪ್ರಕಾಶ್‌ ಹೇಳಿದ್ದಾರೆ.

ಈ ಬಾರಿ ನಡೆದ ಚುನಾವಣೆಯಲ್ಲಿ ಹೀನಾಯವಾಗಿ ಸೋಲುಂಡಿದ್ದ ಶಾಸಕ ವರ್ತೂರು ಪ್ರಕಾಶ್‌, ಇಂದು ತಮ್ಮ ಬೆಂಬಲಿಗರೊಂದಿಗೆ ಆತ್ಮಾವಲೋಕನ ಸಭೆ ನಡೆಸಿದ್ದಾರೆ. ಈ ವೇಳೆ ಮಾತನಾಡಿದ  ವರ್ತೂರು ಪ್ರಕಾಶ್‌, ಕೋಟ್ಯಾಂತರ ರೂಪಾಯಿ ಹಣ ಚೆಲ್ಲಿ ಜೆಡಿಎಸ್ ಅಭ್ಯರ್ಥಿ ಗೆದ್ದಿರಬಹುದು. ಆದರೆ ಈ ಅತಂತ್ರ ಸರ್ಕಾರ ಆರು ತಿಂಗಳು ನಡೆಯೋದಿಲ್ಲ, ಹಾಗಾಗಿ ಒಂದು ವರ್ಷದಲ್ಲಿ ಮತ್ತೆ ಚುನಾವಣೆ ನಡೆಯುತ್ತದೆ. ಆಗ ಮತ್ತೆ ನಾನು ಗೆದ್ದು ಬರುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನಮ್ಮ ಕಾಂಗ್ರೆಸ್ ಪಕ್ಷ ಏನೆಂದು ತೋರಿಸುತ್ತೇನೆ ಎಂದಿದ್ದಾರೆ. ಇದೇ ವೇಳೆ ಸಭೆಗೆ ಆಗಮಿಸಿದ್ದ ಕ್ಷೇತ್ರದ ಕಾರ್ಯಕರ್ತರಿಗೆ ಮಟನ್ ಬಿರಿಯಾನಿ ಊಟ ವ್ಯವಸ್ಥೆ ಮಾಡಲಾಗಿತ್ತು. ಬಿರಿಯಾನಿಗಾಗಿ ಜನರ ನೂಕು ನುಗ್ಗಲು ಹೆಚ್ಚಾಗಿದ್ದರಿಂದ ಬಿರಿಯಾನಿ ಇಲ್ಲವೆಂದು ಬಹಳಷ್ಟು ಜನ ಮುನಿಸಿಕೊಂಡು ಹೋಗುತ್ತಿದ್ದ ದೃಶ್ಯ ಕಂಡು ಬಂದಿತ್ತು.

Leave a Reply

Your email address will not be published.

Social Media Auto Publish Powered By : XYZScripts.com