‘ಶಮಿಕಾ’ ಜನನದಿಂದಾಗಿಯೇ ಕುಮಾರಸ್ವಾಮಿಗೆ ಒಲಿಯಿತಂತೆ ಸಿಎಂ ಪಟ್ಟ…..!!

ರಾಜ್ಯ ರಾಜಕಾರಣದಲ್ಲಿ ಉಂಟಾಗಿದ್ದ ಭಾರೀ ಗೊಂದಲ ಕಡಿಮೆಯಾದಂತಾಗಿದೆ. ಇನ್ನು ನಾಳೆ ಕುಮಾರಸ್ವಾಮಿ ಬಹುಮತ ಸಾಬೀತು ಪಡಿಸಿದರೆ ಯಾರು ಸರ್ಕಾರ ರಚಿಸುತ್ತಾರೆ ಎಂಬ ಗೊಂದಲಕ್ಕೆ ತೆರೆ ಬೀಳಲಿದೆ.

ಈ ಮಧ್ಯೆ  ಕುಮಾರಸ್ವಾಮಿ ಮುಖ್ಯಮಂತ್ರಿಯಾಗುತ್ತಿರುವುದಕ್ಕೆ ಅವರ ಮಗಳು ಶಮಿಕಾ ಕಾರಣವಂತೆ. ಹೀಗಂತ ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ಗಳು ವೈರಲ್ ಆಗಿವೆ. ಜೊತೆಗೆ ಜ್ಯೋತಿಷಿಗಳೂ ಇದನ್ನೇ ಹೇಳುತ್ತಿದ್ದಾರೆ. ಕುಮಾರಸ್ವಾಮಿಯವರಿಗೆ ಹೆಣ್ಣು ಮಗು ಜನಿಸಿದರೆ ಅವರು ಮುಖ್ಯಮಂತ್ರಿ ಪಟ್ಟಕ್ಕೇರುತ್ತಾರೆ ಎಂದು ಕೆಲ ವರ್ಷಗಳ ಹಿಂದೆ ಸ್ವಾಮೀಜಿಯೊಬ್ಬರು ಹೇಳಿದ್ದರಂತೆ. ಅದರಂತೆ ಕುಮಾರಸ್ವಾಮಿ ಹಾಗೂ ರಾಧಿಕಾ ಕುಮಾರಸ್ವಾಮಿ ದಂಪತಿಗೆ ಹೆಣ್ಣು ಮಗು ಜನಿಸಿದ್ದು, ಈಗ ಆ ಹೆಣ್ಣು ಮಗುವಿನಿಂದಲೇ ಅದೃಷ್ಟ ಒಲಿದು ಬಂದಿದೆ ಎಂಬ ಮಾತು ಕೇಳಿಬರುತ್ತಿದೆ.

ಈ ಬಾರಿ ಚುನಾವಣೆಯಲ್ಲಿ  ಬಿಜೆಪಿ 104 ಸ್ಥಾನಪಡೆದಿತ್ತು. ಕಾಂಗ್ರೆಸ್‌ 78 ಸ್ಥಾನ ಹಾಗೂ ಜೆಡಿಎಸ್‌  38 ಸ್ಥಾನ ಗಳಿಸಿದ್ದು, ಅತಿಹೆಚ್ಚು ಸಂಖ್ಯಾಬಲ ಹೊಂದಿದ್ದ ಬಿಜೆಪಿ ಸರ್ಕಾರ ರಚಿಸುವಲ್ಲಿ ವಿಫಲವಾಗಿತ್ತು. ಈ ಹಿಂದೆ ಬಿಜೆಪಿ ಮಾಡಿದ್ದ ಮಾಸ್ಟರ್‌ ಪ್ಲ್ಯಾನನ್ನೇ ಬಳಸಿಕೊಂಡ ಕಾಂಗ್ರೆಸ್‌ ಬಿಜೆಪಿಗೆ ಅಧಿಕಾರ ತಪ್ಪಿಸಲು  ಜೆಡಿಎಸ್‌ ಜೊತೆ ಕೈಜೋಡಿಸಿದೆ. ಹೆಚ್ಚು ಸಂಖ್ಯಾಬಲ ಹೊಂದಿದ್ದರೂ ಸರ್ಕಾರ ರಚಿಸಲಾಗದೆ, ಅತೀ ಕಡಿಮೆ ಸಂಖ್ಯಾಬಲ ಹೊಂದಿರುವ ಜೆಡಿಎಸ್‌ ಗೆ ಮುಖ್ಯಮಂತ್ರಿ ಸ್ಥಾನ ದೊರಕಿರುವುದು ನಿಜಕ್ಕೂ ದೇವರ ಆಶಿರ್ವಾದ ಎಂದು ಎಚ್‌ಡಿಕೆ ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ಅಲ್ಲದೆ ಶಮಿಕಾಳಿಂದಾಗಿಯೇ ಅಧಿಕಾರ ಸಿಕ್ಕಿದೆ ಎಂದು  ಜ್ಯೋತಿಷಿಗಳೂ ಹೇಳುತ್ತಿದ್ದಾರೆ.

ಇದು ಎಷ್ಟು ನಿಜವೋ ಗೊತ್ತಿಲ್ಲ. ಏನೇ ಆಗಲಿ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವ ಎಚ್‌ಡಿಕೆ ರಾಜ್ಯದ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಉತ್ತಮ ಆಡಳಿತ ನೀಡಲಿ ಎಂಬುದೇ ನಮ್ಮ ಆಶಯ.

Leave a Reply

Your email address will not be published.

Social Media Auto Publish Powered By : XYZScripts.com