ಕೊಹ್ಲಿ ಆಯ್ತು….ಈಗ ಪ್ರಧಾನಿಗೆ ಮತ್ತೊಂದು ಸವಾಲು ಹಾಕಿದ RJD ಮುಖಂಡ : ಒಪ್ಪಿಕೊಳ್ತಾರಾ ಮೋದಿ..?

ದೆಹಲಿ : ಕೊಹ್ಲಿ ಆಯ್ತು…ಈಗ  ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್‌ ಪ್ರಧಾನಿ ಮೋದಿಗೆ ಸವಾಲು ಎಸೆದಿದ್ದಾರೆ. ಹಮ್ ಫಿಟ್‌ ತೋ ಇಂಡಿಯಾ ಫಿಟ್‌ ಅಭಿಯಾನದ ಹಿನ್ನೆಲೆಯಲ್ಲಿ ಕೊಹ್ಲಿ, ಮೋದಿಗೆ ಸವಾಲು ಹಾಕಿದ್ದರು. ಈ  ಸವಾಲನ್ನು ಮೋದಿ ಸಹ ಒಪ್ಪಿದ್ದರು. ಈ ಬೆನ್ನಲ್ಲೇ ತೇಜಸ್ವಿ ಯಾದವ್‌ ಸವಾಲು ಹಾಕಿದ್ದು, ನನ್ನ  ಸವಾಲನ್ನು ಸ್ವೀಕರಿಸಿ ನೋಡೋಣ ಎಂದಿದ್ದಾರೆ.

ಕೊಹ್ಲಿ ಅವರ ಫಿಟ್‌ನೆಸ್‌ ಚಾಲೆಂಜ್‌ ಸ್ವೀಕರಿಸಿದ್ದೀರಿ, ಅದರಂತೆ ಯುವಕರಿಗೆ ಉದ್ಯೋಗ ಕೊಡಿಸಿ, ರೈತರಿಗೆ ಸಹಾಯ ಮಾಡಿ. ದಲಿತರು, ಅಸಹಾಯಕರ ಮೇಲೆ ಹಲ್ಲೆಗಳು ನಡೆಯದಂತೆ ನೋಡಿಕೊಳ್ಳುತ್ತೇನೆ ಎಂದು ಪ್ರಮಾಣ ಮಾಡಿ. ನನ್ನ ಈ ಸವಾಲನ್ನು ಸ್ವೀಕರಿಸಲು ತಯಾರಿದ್ದೀರಾ ಮೋದಿ ಸರ್ ಎಂದು ಟ್ವೀಟ್ ಮಾಡಿದ್ದಾರೆ.

Leave a Reply

Your email address will not be published.