ಲೋಕಸಭಾ ಚುನಾವಣೆವರೆಗೂ ಮೈತ್ರಿ ಸರ್ಕಾರ ಸುಭದ್ರವಾಗಿರಲಿದೆ…ಆಮೇಲೆ…? : ಭವಿಷ್ಯ ನುಡಿದ ನಾಯಕ

ಹಾವೇರಿ : ಮುಂಬರುವ ಲೋಕಸಭಾ ಚುನಾವಣೆವರೆಗೂ ಸಮ್ಮಿಶ್ರ ಸರ್ಕಾರ ಸುಭದ್ರವಾಗಿರುತ್ತದೆ. ನಂತರದ ದಿನಗಳಲ್ಲಿ ತೂಗುಗತ್ತಿ ಮೇಲೆ ಸರ್ಕಾರ ನಡೆಯಲಿದೆ ಎಂದು  ಹಿಂದುಳಿದ ವರ್ಗದವರ ನಾಯಕ ಸಿ.ಎಸ್‌ ದ್ವಾರಕಾನಾಥ್ ಭವಿಷ್ಯ ನುಡಿದಿದ್ದಾರೆ.

ಹಾವೇರಿಯಲ್ಲಿ ಮಾತನಾಡಿದ ಅವರು, ಎರಡು ಪಕ್ಷದ ನಾಯಕರು ಅಧಿಕಾರದ ಲಾಲಸೆಗೆ ಹೋದ್ರೆ ಸರ್ಕಾರ ಉರುಳುವುದು ಖಚಿತ ಎಂದಿರುವ ಅವರು, ಹೊಂದಾಣಿಕೆಯಿಂದ ನಡೆದರೆ ಮಾತ್ರ ಐದು ವರ್ಷ ಪೂರೈಸಲು ಸಾಧ್ಯ. ಮೈಲಾರಲಿಂಗೇಶ್ವರನ ಕಾರ್ಣಿಕ ನುಡಿ ಸತ್ಯವಾಗಿದೆ. ಕಾರ್ಣಿಕ ನುಡಿಯಂತೆ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಬಂದಿದೆ.ಮೈಲಾರಲಿಂಗೇಶ್ವ ಸಮಸ್ತ ಭಕ್ತರನ್ನು ಕಾಯುತ್ತಾನೆರಾಜ್ಯದಲ್ಲಿ ಉತ್ತಮ ಮಳೆಯಾಗಿ ರೈತರ ಬಾಳು ಹಸನಾಗಲಿದೆ ಎಂದಿದ್ದಾರೆ.

Leave a Reply

Your email address will not be published.