ಮೌಂಟ್ ಎವರೆಸ್ಟ್ ಏರಿ ಸಾಹಸ ಮೆರೆದ ಅಪ್ಪ – ಮಗಳ ಜೋಡಿ…!

ಪ್ರಪಂಚದ ಅತ್ಯಂತ ಎತ್ತರದ ಶಿಖರವೆಂದು ಹೆರಾದ ಮೌಂಟ್ ಎವರೆಸ್ಟ್ ಪರ್ವತವನ್ನು ಏರಿದ ಅಪ್ಪ – ಮಗಳ ಜೋಡಿಯೊಂದು ಸಾಹಸ ಮೆರೆದಿದ್ದಾರೆ. ರಾಜಧಾನಿ ದೆಹಲಿ ಸಮೀಪದ ಗುಡ್ಗಾಂವ್ ನಗರದ ನಿವಾಸಿಗಳಾದ ಅಜೀತ್ ಬಜಾಜ್ ಹಾಗೂ ಪುತ್ರಿ ದೀಯಾ ಬಜಾಜ್, 8848 ಮೀಟರ್ ಎತ್ತರದ ಮೌಂಟ್ ಎವರೆಸ್ಟ್ ಪರ್ವತವನ್ನು ಮೇ 16ರಂದು ಏರಿ ಸಾಧನೆ ಮಾಡಿದ್ದಾರೆ.

Image result for father daughter duo mount everest

ಈ ಸಾಧನೆ ಮಾಡಿದ ಭಾರತದ ಮೊದಲ ತಂದೆ-ಮಗಳ ಜೋಡಿ ಎಂಬ ಖ್ಯಾತಿಗೆ ಅಜೀತ್ ಹಾಗೂ ದೀಯಾ ಪಾತ್ರರಾಗಿದ್ದಾರೆ. ಪರ್ವತ ಹತ್ತುವ ವೇಳೆ ಹಲವಾರು ಪ್ರಾಣಾಂತಿಕ ಸವಾಲುಗಳ ನಡುವೆ ವಾತಾವರಣದ ವಿಪರೀತ ಪರಿಸ್ಥಿತಿಗಳನ್ನು ಎದುರಿಸಿ ಎವರೆಸ್ಟ್ ಶಿಖರವನ್ನು ಏರಿದ್ದಾರೆ.

Image result for father daughter duo mount everest

ಪದ್ಮಶ್ರೀ ಪ್ರಶಸ್ತಿಯನ್ನು ಪಡೆದಿರುವ ಅಜೀತ್ ಬಜಾಜ್, ಹತ್ತು ವರ್ಷಗಳ ಹಿಂದೆ ಭೂಮಿಯ ದಕ್ಷಿಣ ಧ್ರುವ ಹಾಗೂ ಉತ್ತರ ಧ್ರುವ ಸ್ಕೀಯಿಂಗ್ ಮಾಡಿದ ಪ್ರಥಮ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. 53 ವರ್ಷದ ಅಜೀತ್ ಬಜಾಜ್, ಅಡ್ವೆಂಚರ್ ಟ್ರಾವೆಲ್ ಕಂಪನಿಗಳನ್ನು ನಡೆಸುತ್ತಾರೆ.

Leave a Reply

Your email address will not be published.