Cricket : ಕೊಹ್ಲಿಗೆ ಗಾಯದ ಸಮಸ್ಯೆ : ಸರ್ರೆ ತಂಡಕ್ಕೆ ಅಲಭ್ಯ, ಜೂನ್ 15ಕ್ಕೆ ಫಿಟ್ನೆಸ್ ಪರೀಕ್ಷೆ

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕತ್ತಿನ ಗಾಯದ ಸಮಸ್ಯೆಗೆ ಒಳಗಾಗಿದ್ದು,, ಜೂನ್ ತಿಂಗಳಿನಲ್ಲಿ ನಡೆಯಲಿರುವ ಇಂಗ್ಲೀಷ್ ಕೌಂಟಿ ಕ್ರಿಕೆಟ್ ನಿಂದ ಹಿಂದೆ ಸರಿದಿದ್ದಾರೆ. ‘ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ತಂಡದ ಪರವಾಗಿ ಆಡುವ ವೇಳೆ ಕತ್ತಿನ ಗಾಯಕ್ಕೆ ಒಳಗಾಗಿದ್ದು, ಸರ್ರೆ ತಂಡಕ್ಕೆ ವಿರಾಟ್ ಅಲಭ್ಯರಾಗಲಿದ್ದಾರೆ ‘ ಎಂದು ಐಸಿಸಿ (International Cricket Council) ಗುರುವಾರ ತಿಳಿಸಿದೆ.

‘ ಜೂನ್ 15ಕ್ಕೆ ಫಿಟ್ನೆಸ್ ಪರೀಕ್ಷೆ ನಡೆಯಲಿದ್ದು, ಐರ್ಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧದ ಸರಣಿ ಆರಂಭಕ್ಕೂ ಮುನ್ನ ವಿರಾಟ್ ಕೊಹ್ಲಿ, ಚೇತರಿಸಿಕೊಳ್ಳುವ ನಿರೀಕ್ಷೆಯಿದೆ ‘ ಎಂದು ಐಸಿಸಿ ತನ್ನ ಟ್ವೀಟ್ ನಲ್ಲಿ ತಿಳಿಸಿದೆ.

ಜೂನ್ 14ರಿಂದ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಅಫಘಾನಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯಕ್ಕೂ ವಿರಾಟ್ ಕೊಹ್ಲಿ ಅಲಭ್ಯರಾಗಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com