300 ರೂಗೆ 100GB ಡೇಟಾ ಕೊಡ್ತಿದ್ದೀವಿ, ಇದಕ್ಕಿಂತ ಅಚ್ಛೇ ದಿನ್‌ ಬೇಕಾ : BJP ನಾಯಕ

ದೆಹಲಿ : ಮೋದಿ ಸರ್ಕಾರದ ಆಡಳಿತದಲ್ಲಿ ತೈಲ ಬೆಲೆ ಹೆಚ್ಚಾಗುತ್ತಿದ್ದು, ಇದಕ್ಕೆ ಎಲ್ಲೆ ಡೆ ಅಸಮಾಧಾನ ವ್ಯಕ್ತವಾಗುತ್ತಿದೆ. ಅಲ್ಲದೆ ವಿಪಕ್ಷಗಳೂ ಮೋದಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದು, ಇದಕ್ಕೆ ಬಿಜೆಪಿ ಹಿರಿಯ ನಾಯಕರೊಬ್ಬರು ತಿರುಗೇಟು ನೀಡಿದ್ದಾರೆ.

ಕಾಂಗ್ರೆಸ್‌ ಸರ್ಕಾರ ತಮ್ಮ ಅಧಿಕಾರಾವಧಿಯಲ್ಲಿನ ಸ್ಥಿತಿಯನ್ನು ಮರೆತು ಈಗಿನ ತೈಲಬೆಲೆ ಏರಿಕೆಗೆ ಕೇಂದ್ರ ಸರ್ಕಾರವನ್ನು ಹೊಣೆ ಮಾಡುತ್ತಿದೆ. 2004 ರಲ್ಲಿ ಒಂದು ಲೀಟರ್ ಪೆಟ್ರೋಲ್ ಗೆ 29 ರೂ. ಇತ್ತು.  2014 ರಲ್ಲಿ 74 ರೂ ಆಗಿತ್ತು. ಒಂದು ಕೆಜಿ ತುಪ್ಪಕ್ಕೆ 2004 ರಲ್ಲಿ 130 ರೂ ಇತ್ತು. 2014 ರಲ್ಲಿ 380 ರೂ ಆಗಿತ್ತು. ಮೊಬೈಲ್ ಡೇಟಾ ದರ 1 ಜಿಬಿ ಗೆ 300 ರೂ ಇತ್ತು. ಈಗ 300 ರೂ. ಗೆ 100 ಜಿಬಿ ಸಿಗುತ್ತೆ. ಕಾಂಗ್ರೆಸ್ ಇದ್ದಾಗ ಕಾಲ್ ದರಗಳು 1 ನಿಮಿಷಕ್ಕೆ 8 ರೂ. ಇದ್ದವು. ಆದರೆ ಈಗ ಡೇಟಾ ಪ್ಯಾಕ್ ಜೊತೆ ಕಾಲ್ ಸಹ ಉಚಿತವಾಗಿ ನೀಡಲಾಗುತ್ತಿದೆ ಎಂದು ಬಿಜೆಪಿ ಮುಖಂಡ ಜೆ ಮಿಶ್ರಾ ವಾಗ್ದಾಳಿ ನಡೆಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com