ಭೀಕರ ಅಪಘಾತದಲ್ಲಿ ಟಿವಿ ನಿರೂಪಕ ಚಂದನ್ ಹಾಗೂ ಯುವತಿಯ ಸಾವು : ಇಬ್ಬರಿಗೆ ಗಂಭೀರ ಗಾಯ

ದಾವಣಗೆರೆ : ನಿಂತ ಲಾರಿಗೆ ಕಾರ್ ಡಿಕ್ಕಿಯಾದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ನಡೆದಿದೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿ ಗ್ರಾಮದ ಸೇತುವೆ ಬಳಿ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಅಪಘಾತ ಸಂಭವಿಸಿದೆ. ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ದಾವಣಗೆರೆಯ ಖಾಸಗಿ ಆಸ್ಪತ್ರೆ ಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಅಪಘಾತದಲ್ಲಿ ಖಾಸಗಿ ವಾಹಿನಿಯ ಕಾರ್ಯಕ್ರಮ ನಿರೂಪಕ ಚಂದನ್ ಹಾಗೂ ಇನ್ನೊಬ್ಬ ಯುವತಿ ಸಾವನ್ನಪ್ಪಿದ್ದಾರೆ. ಕಾರಿನಲ್ಲಿ ಇದ್ದವರು ಕಿರುತೆರೆ ಕಲಾವಿದರಾಗಿದ್ದರು. ಖಾಸಗಿ ವಾಹಿನಿ ಕಾರ್ಯಕ್ರಮ ನಿರೂಪಕ ಚಂದ್ರಶೇಖರ (೩೪) . ಸಂತೋಷಿ (೨೪) ಸಾವನ್ನಪ್ಪಿದ್ದಾರೆ. ರಾಮು ಮತ್ತು ಸುನೀತಾ ಎಂಬುವರಿಗೆ ಗಂಭೀರ ಗಾಯಗಳಾಗಿವೆ.

ಇವರು ಬೆಂಗಳೂರು ಕಡೆಯಿಂದ ಹುಬ್ಬಳ್ಳಿಗೆ ಹೋಗುತ್ತಿದ್ದರು. ರಸ್ತೆ ಪಕ್ಕಕ್ಕೆ ನಿಂತ ಲಾರಿಗೆ ಕಾರ್ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಹರಿಹರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com