HDK ಪ್ರಮಾಣವಚನಕ್ಕೆ ಬಂದ ತೃತೀಯ ರಂಗದ ನಾಯಕರೆಲ್ಲ ಕಪ್ಪೆ, ಅಣಬೆಗಳಿದ್ದಂತೆ : ಶ್ರೀರಾಮುಲು

ಬಳ್ಳಾರಿ : ನಿನ್ನೆ ನಡೆದ ಪ್ರಮಾಣ ವಚನದಲ್ಲಿ ತೃತೀಯ ರಂಗದ ನಾಯಕರು ಪಾಲ್ಗೊಂಡಿದ್ದಾರೆ. ಕಾಂಗ್ರೆಸ್ ಪತನವಾಗಲಿಕ್ಕೆ ಇದು ವೇದಿಕೆಯಾಗಿದೆ ಎಂದು ಮೊಳಕಾಲ್ಮೂರು ಕ್ಷೇತ್ರದ ಬಿಜೆಪಿ ಶಾಸಕ ಬಿ.ಶ್ರೀರಾಮುಲು ಹೇಳಿದ್ದಾರೆ.

ಬಳ್ಳಾರಿಯಲ್ಲಿಂದು ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತೃತೀಯ ರಂಗದಲ್ಲಿ ಕಾಂಗ್ರೆಸ್ ಪಕ್ಷ ಬೇರೆ ಅಂತ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ತೃತೀಯ ರಂಗ ಕಾಂಗ್ರೆಸ್ ವಿರುದ್ಧ ಹೋರಾಟ ನಡೆಸಿದೆ. ಮಳೆಗಾಲದಲ್ಲಿ ಅಣಬೆಯ ರೀತಿ ತೃತೀಯ ರಂಗ ಹುಟ್ಟಿ ಮರೆಯಾಗುವಂತೆ ಗೋಚರಿಸುತ್ತಿವೆ. ಒಂದೇ ತಕ್ಕಡಿಯಲ್ಲಿ ತೂಗುವ ಕಪ್ಪೆಗಳಿದ್ದಂತೆ. ನಿನ್ನೆ ಬಂದ ತೃತೀಯ ರಂಗದ ನಾಯಕರಲ್ಲಿ ಹೊಂದಾಣಿಕೆ ಇಲ್ಲ. ರಾಜಕೀಯ ಸ್ವಾರ್ಥಕ್ಕಾಗಿ ಮೋದಿ ಅವರ ವಿರುದ್ಧ ತೃತೀಯ ರಂಗದ ನಾಯಕರು ಒಂದಾಗಿದ್ದಾರೆ ಎಂದು ಕಿಡಿ ಕಾರಿದ್ದಾರೆ.

ರೈತರ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದ ಹೆಚ್‍ಡಿಕೆ ಯೂ ಟರ್ನ್ ಹೊಡೆದಿದ್ದಾರೆ. ರೈತರ ಬಗ್ಗೆ ಕುಮಾರಸ್ವಾಮಿಗೆ ಕಾಳಜಿ ಇಲ್ಲ. ಹೇಳಿದಂತೆ ನಡೆದುಕೊಳ್ಳಬೇಕು. ಸಾಲ ಮನ್ನಾ ಮಾಡದಿದ್ದರೆ ಕುರ್ಚಿ ಬಿಟ್ಟು ಹೋಗಿ ಎಂದಿದ್ದಾರೆ. ನಾವು ಯಾವುದೇ ಆಪರೇಷನ್ ಕಮಲ ಮಾಡುವುದಿಲ್ಲ. ಬಹುಮತದಲ್ಲಿ ನಾವು ಸೋತಿದ್ದೇವೆ. ಕಾಂಗ್ರೆಸ್ ಮತ್ತು ಜೆಡಿಎಸ್ ಸೇರಿದಂತೆ ತೃತೀಯ ರಂಗದ ಗೊಡವೆಗೆ ನಾವು ಹೋಗುವುದಿಲ್ಲ ಎಂದಿದ್ದಾರೆ.

Leave a Reply

Your email address will not be published.