ಮಾವು ಪ್ರಿಯರಿಗೆ ತಟ್ಟಿದ ನಿಫಾ ವೈರಸ್‌ ಭೀತಿ : HDK ಸಹಾಯದ ನಿರೀಕ್ಷೆಯಲ್ಲಿ ಮಾವು ಬೆಳೆಗಾರರು

ಬೆಂಗಳೂರು : ಇನ್ನೇನು ಮಾವಿನ ಹಣ್ಣಿನ ಸೀಸನ್‌ ಬಂದೇ ಬಿಟ್ಟಿದೆ ಎಂದು ಮಾವು ಪ್ರಿಯರು ಸಂತಸ ಪಟ್ಟಿದ್ದರು. ಆದರೆ ಈಗ ಮಾವು ಪ್ರಿಯರಿಗೆ ನಿರಾಸೆಯಾಗಿದ್ದು , ನಿಫಾ ವೈರಸ್ ಹರಡುವ ಆತಂಕ ಎದುರಾಗಿದೆ.

ನಿಫಾ ವೈರಸ್‌ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ನಗರಿಯಲ್ಲಿ ಏರ್ಪಡಿಸಿದ್ದ ಮಾವು ಮೇಳ‌ ರದ್ದಾಗಿರುವುದಾಗಿ ತಿಳಿದುಬಂದಿದೆ. ಕರ್ಜನ್ ಪಾರ್ಕ್ ನಲ್ಲಿ ಪ್ರತೀ ವರ್ಷ ಮಾವು‌ ಮೇಳ  ನಡೆಯುತ್ತಿತ್ತು. ಆದರೆ ಈ ಬಾರಿ ಬಾವಲಿ ತಿಂದ ಹಣ್ಣುಗಳು ಮೇಳಕ್ಕೆ ಬರುವ ಆತಂಕ ಎದುರಾಗಿದ್ದು, ಮಾವು ಇನ್ನೂ ಮಾಗದ ಕಾರಣ ಮಾವು ಮೇಳ ರದ್ದುಗೊಳಿಸಲಾಗಿದೆ. ಜೊತೆಗೆ ಜೂನ್ ತಿಂಗಳಲ್ಲಿ ಮಾವು ಮೇಳ ನಡೆಸಲು ತೋಟಗಾರಿಕೆ‌ ಇಲಾಖೆ ನಿರ್ಧಾರ ಮಾಡಲಾಗಿದೆ.

ಮತ್ತೊಂದೆಡೆ ನಿಫಾ ವೈರಸ್ ಆತಂಕದಿಂದಾಗಿ ಮಾವು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದು, ಜನ ಹಣ್ಣುಗಳ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಮಾವು ಬೆಲೆ ಕುಸಿತದಿಂದ ರೈತರು‌ ಕಂಗಾಲಾಗಿದ್ದು,  ಮಾವು ಬೆಳೆಗಾರರು ಮುಖ್ಯಮಂತ್ರಿಗಳ ಸಹಾಯದ ನಿರೀಕ್ಷೆಯಲ್ಲಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com