WhatsApp ಗ್ರೂಪ್‍ನಿಂದ ಹೊರಹಾಕಿದ ಹಿನ್ನೆಲೆ : ಯುವಕರಿಂದ ಅಡ್ಮಿನ್‍ಗೆ ಚಾಕು ಇರಿತ..!

ವಾಟ್ಸಾಪ್ ಗ್ರೂಪ್ ನಿಂದ ಯುವಕನೊಬ್ಬನನ್ನು ಹೊರಹಾಕಿದ್ದಕ್ಕೆ ಅಡ್ಮಿನ್ ಮೇಲೆ ಹಲ್ಲೆ ನಡೆಸಿ ಚಾಕು ಇರಿದಿರುವ ಘಟನೆ ಮಹಾರಾಷ್ಟ್ರದ ಅಹ್ಮದ್ ನಗರದಲ್ಲಿ ನಡೆದಿದೆ. ಅಹ್ಮದ್ ನಗರ ನಿವಾಸಿಯಾದ 18 ವರ್ಷದ ಚೈತನ್ಯ ಶಿವಾಜಿ ಭೊರ್ ಎಂಬಾತ ಚಾಕು ಇರಿತಕ್ಕೊಳಗಾಗಿದ್ದಾನೆ.

ಅಹ್ಮದ್ ನಗರದ ಕೃಷಿ ವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ಚೈತನ್ಯ ವಾಟ್ಸಾಪ್ ಗ್ರೂಪ್ ಒಂದನ್ನು ಕ್ರಿಯೇಟ್ ಮಾಡಿದ್ದ. ಅದೇ ಕಾಲೇಜಿನ ವಿದ್ಯಾರ್ಥಿಗಳನ್ನು ತನ್ನ ಗ್ರೂಪ್ ನಲ್ಲಿ ಸೇರಿಸಿಕೊಂಡಿದ್ದ. ಆ ಗ್ರೂಪ್ ನ ಸದಸ್ಯನಾಗಿದ್ದ ಸಚಿನ್ ಎಂಬಾತ ಇತ್ತೀಚೆಗೆ ಕಾಲೇಜನ್ನು ತೊರೆದಿದ್ದ.

Image result for whatsapp

ಸಚಿನ್ ಕಾಲೇಜು ತೊರೆದ ಕಾರಣದಿಂದ ಗ್ರೂಪ್ ಅಡ್ಮಿನ್ ಚೈತನ್ಯ ಆತನನ್ನು ಗ್ರೂಪಿನಿಂದ ರಿಮೂವ್ ಮಾಡಿದ್ದಾನೆ. ಇದು ತನಗಾದ ಅವಮಾನ ಎಂದು ಭಾವಿಸಿದ ಸಚಿನ್, ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾನೆ.

ಮೇ 17ರಂದು ಸಾಯಂಕಾಲ ಚೈತನ್ಯ ಊಟಕ್ಕೆಂದು ಹೊರಗೆ ತೆರಳಿದ್ದಾಗ ಬಂದ ಸಚಿನ್ ಮೂವರು ಸ್ನೇಹಿತರು ಆತನ ಹಲ್ಲೆ ನಡೆಸಿ ಚಾಕುವಿನಿಂದ ಇರಿದಿದ್ದಾರೆ. ಇರಿತದಿಂದ ಗಂಭೀರವಾಗಿ ಗಾಯಗೊಂಡು ಒದ್ದಾಡುತ್ತಿದ್ದ ಚೈತನ್ಯನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com