ಲಿಂಗಾಯತ ಸ್ವಾಮೀಜಿಗೆ ಎಚ್ಚರಿಕೆ ನೀಡಿದ HDK – ಕ್ಷಮೆಯಾಚಿಸಲು BSY ಆಗ್ರಹ ….

ಲಿಂಗಾಯತ ಸ್ವಾಮೀಜಿಯೊಬ್ಬರು ನೀಡಿದ್ದ ಹೇಳಿಕೆಯನ್ನು ಖಂಡಿಸಿದ ಸಿಎಂ ಕುಮಾರಸ್ವಾಮಿ, ಸ್ವಾಮೀಜಿಗಳು ಧರ್ಮದ ಕಾರ್ಯ ಮಾಡಬೇಕೇ ಹೊರತು, ರಾಜಕೀಯ ಮಾಡಲು ಸಲಹೆ ನೀಡುವುದು ಬೇಡ. ನಾನು ಯಾವುದೇ ಜಾತಿ ರಾಜಕಾರಣ ಮಾಡಲ್ಲ. ಸ್ವಾಮೀಜಿ ಅವರ ಮಾತು ನೋವು ತಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ದೇವರು ನನಗೆ ಅವಕಾಶ ಕೊಟ್ಟಿದ್ದಾನೆ. ಆರೂವರೆ ಕೋಟಿ ಜನರ ರಕ್ಷಣೆ ನಮ್ಮ ಮೊದಲ ಆದ್ಯತೆ ಎಂದು ಕುಮಾರಸ್ವಾಮಿ ಹೇಳಿದರು.
ಮೋದಿ-ಶಾ ಅಶ್ವಮೇಧ ಕಟ್ಟಿಹಾಕುವ ಮಾತು ನಿಜವಾಗಿದೆ .
ಉತ್ತರ ಪ್ರದೇಶ ಚುನಾವಣೆಯಲ್ಲಿ ಬಂದ ಫಲಿತಾಂಶದ ದಿನವೇ ನಾನು ಅಮಿತ್‌ ಶಾ- ಮೋದಿ ಅವರ ಅಶ್ವಮೇಧವನ್ನು ನಾವೇ ಕಟ್ಟಿ ಹಾಕುತ್ತೇವೆ ಎಂದು ಹೇಳಿದ್ದೆ. ಅದು ನಾನು ನಿಜವಾಗಿದೆ ಎಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡರು. ಕಾಂಗ್ರೆಸ್‌ – ಜೆಡಿಎಸ್‌ ಒಗ್ಗೂಡಿ ಈಗ ರಾಜ್ಯದಲ್ಲಿ ಅಶ್ವಮೇಧಯಾತ್ರೆ ತಡೆದಿದ್ದೇವೆ ಎಂದರು.
ಮೋದಿ ವಿರುದ್ಧ ಹರಿಹಾಯ್ದ ನೂತನ ಸಿಎಂ .
ಪ್ರಧಾನಿ ಮೋದಿ ಭರವಸೆ ನೋಡಿ ಬೆಳಗಾವಿ, ಧಾರವಾಡ ಕರಾವಳಿ ಜನ ವೋಟು ಹಾಕಿದ್ದಾರೆ. ಪ್ರಧಾನಿ ಮಹದಾಯಿ ಸಮಸ್ಯೆ ಬಗೆಹರಿಸ್ತಾರಾ.. ಈಗ ಅವರು,ಈ ಸಮಸ್ಯೆ ಬಗೆಹರಿಸಬೇಕು ಎಂದರು. ಪರೋಕ್ಷವಾಗಿ ಅಲ್ಲಿನ ಜನರನ್ನು ಪರೋಕ್ಷವಾಗಿ ನೂತನ ಸಿಎಂ ಟೀಕಿಸಿದರು.
ಸಿಎಂ ಕುಮಾರಸ್ವಾಮಿಯವರೇ, ಮುಖ್ಯಮಂತ್ರಿಯಾಗಿ ನಡೆಸಿದ ಮೊದಲ ಸುದ್ದಿಗೋಷ್ಠಿಯಲ್ಲಿ ಸಾಣೆಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರಿಗೆ ‘ರಾಜಕೀಯಕ್ಕೆ ನೇರವಾಗಿ ಬನ್ನಿ’ ಎಂದು ಕರೆ ನೀಡುವ ಮೂಲಕ ಉದ್ದಟತನ ಪ್ರದರ್ಶಿಸಿದ್ದೀರಿ. ಇದು ಸಮಸ್ತ ಮಠಾಧೀಶರಿಗೆ ಹಾಗೂ ಸ್ವಾಮೀಜಿಗಳಿಗೆ ತೋರಿರುವ ಅಗೌರವ. ಪರಿಸ್ಥಿತಿ ಕೈಮೀರುವ ಮುನ್ನ ಕ್ಷಮೆಯಾಚಿಸಿ.

One thought on “ಲಿಂಗಾಯತ ಸ್ವಾಮೀಜಿಗೆ ಎಚ್ಚರಿಕೆ ನೀಡಿದ HDK – ಕ್ಷಮೆಯಾಚಿಸಲು BSY ಆಗ್ರಹ ….

Leave a Reply

Your email address will not be published.

Social Media Auto Publish Powered By : XYZScripts.com