IPL : ಡು ಪ್ಲೆಸಿಸ್ ಅಜೇಯ ಹೋರಾಟ : ಫೈನಲ್ ಗೆ ಲಗ್ಗೆಯಿಟ್ಟ ಚೆನ್ನೈ : ಎಡವಿದ ಸನ್ ರೈಸರ್ಸ್

ಮುಂಬೈ ವಾಂಖೇಡೆ ಮೈದಾನದಲ್ಲಿ ಮಂಗಳವಾರ ನಡೆದ ಐಪಿಎಲ್ ಟೂರ್ನಿಯ ಕ್ವಾಲಿಫೈಯರ್-1 ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 2 ವಿಕೆಟ್ ಗಳ ರೋಚಕ ಜಯ ಸಾಧಿಸಿದೆ. ಇದರೊಂದಿಗೆ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ 7 ಬಾರಿಗೆ ಐಪಿಎಲ್ ಫೈನಲ್ ಗೆ ಲಗ್ಗೆಯಿಟ್ಟಿದೆ.

ಟಾಸ್ ಗೆದ್ದ ಚೆನ್ನೈ ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟ್ ಮಾಡಿದ ಸನ್ ರೈಸರ್ಸ್ 20 ಓವರುಗಳಲ್ಲಿ 7 ವಿಕೆಟ್ ಕಳೆದುಕೊಂಡು 139 ರನ್ ಮೊತ್ತ ಕಲೆಹಾಕಿತು. SRH ಪರವಾಗಿ ಕಾರ್ಲೊಸ್ ಬ್ರಾತ್ ವೈಟ್ 43, ಯೂಸುಫ್ ಪಠಾಣ್ 24 ಹಾಗೂ ಕೇನ್ ವಿಲಿಯಮ್ಸನ್ 24 ರನ್ ಗಳಿಸಿ ತಂಡಕ್ಕೆ ಆಸರೆಯಾದರು.

Image result for SRH CSK qualifier-1 faf

ಗುರಿಯನ್ನು ಬೆನ್ನತ್ತಿದ ಚೆನ್ನೈ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸಮನ್ ಗಳು ವಿಫಲರಾದರು. ಈ ವೇಳೆ ಆಪತ್ಬಾಂಧವನಾಗಿ ಕ್ರೀಸ್ ನಲ್ಲಿ ನಿಂತ ಫಾಫ್ ಡು ಪ್ಲೆಸಿಸ್ ಅಜೇಯ ಹೋರಾಟ ನಡೆಸಿ ತಂಡವನ್ನು ಜಯದ ದಡಕ್ಕೆ ತಲುಪಿಸಿದರು. 42 ಎಸೆತಗಳನ್ನೆದುರಿಸಿದ ಫಾಫ್ ಡು ಪ್ಲೆಸಿಸ್, 5 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ ಅಜೇಯ 67 ರನ್ ಗಳಿಸಿದರು.

 

Leave a Reply

Your email address will not be published.

Social Media Auto Publish Powered By : XYZScripts.com