18ನೇ ವಸಂತಕ್ಕೆ ಕಾಲಿಟ್ಟ ಶಾರುಖ್ ಪುತ್ರಿ : ಸುಹಾನಾಗೆ ಕಿಂಗ್ ಖಾನ್ Special ಶುಭಾಶಯ

ಬಾಲಿವುಡ್ ಅಂಗಳದ ಸ್ಟಾರ್ ನಟರಲ್ಲಿ ಒಬ್ಬರಾದ ಶಾರುಖ್ ಖಾನ್ ಅವರ ಪುತ್ರಿ ಸುಹಾನಾ ಮಂಗಳವಾರ 18ನೇ ವಸಂತಕ್ಕೆ ಕಾಲಿಟ್ಟಿದ್ದಾಳೆ. ಸುಹಾನಾ  ತನ್ನ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಂಡಿದ್ದು, ಖಾಸಗಿಯಾಗಿ ನಡೆದ ಬರ್ತ್ ಡೇ ಪಾರ್ಟಿಗೆ ಖಾನ್ ಪರಿವಾರದ ಆಪ್ತರು ಹಾಗೂ ಕೆಲವು ಸ್ನೇಹಿತರಿಗೆ ಮಾತ್ರ ಆಹ್ವಾನವಿತ್ತು.

Related image

ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಮುದ್ದಿನ ಮಗಳಿಗೆ, ಕಿಂಗ್ ಖಾನ್ ವಿಶೇಷ ಸಂದೇಶವೊಂದರ ಮೂಲಕ ಶುಭಾಶಯ ಕೋರಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಸುಹಾನಾಳ ಚಿತ್ರವೊಂದನ್ನು ಪೋಸ್ಟ್ ಮಾಡಿರುವ ಶಾರುಖ್ ‘ Like all daughters, I knew you were also meant for flying, and now u can also legally do what u have been doing since u were 16..! Love u. ‘ ಎಂದು ಬರೆದುಕೊಂಡಿದ್ದಾರೆ.

ಮಾಡೆಲಿಂಗ್, ಅಭಿನಯದಲ್ಲಿ ಆಸಕ್ತಿ ಹೊಂದಿರುವ ಸುಹಾನಾ ಭವಿಷ್ಯದಲ್ಲಿ ನಟಿಯಾಗುವ ಆಕಾಂಕ್ಷೆಯನ್ನು ಹೊಂದಿದ್ದಾರೆ.

 

Leave a Reply

Your email address will not be published.