ಗುಪ್ತಚರ ಇಲಾಖೆಯ ಅಧಿಕಾರಿಗಳೇ ಬೇಧಿಸಲಾಗದಂತಹ ಮೊಬೈಲ್‌ ತಯಾರಿಸುತ್ತಿದ್ದಾರಂತೆ ಉಗ್ರರು !!

ದೆಹಲಿ : ಭಾರತೀಯ ಗುಪ್ತಚರ ಇಲಾಖೆ ಅಧಿಕಾರಿಗಳೂ  ಬೇಧಿಸಲಾಗದಂತಹ ಮೊಬೈಲ್‌ ಫೋನನ್ನು  ಲಷ್ಕರೆ ತೊಯ್ಬಾ ಉಗ್ರ ಸಂಘಟನೆ ಅಭಿವೃದ್ಧಿ ಪಡಿಸಿರುವುದಾಗಿ ತಿಳಿದುಬಂದಿದೆ.

ಉಗ್ರ ಸಂಘಟನೆಯು ತನ್ನ ಸದಸ್ಯರೊಂದಿಗೆ  ಸಂಪರ್ಕ ಸಾಧಿಸಲು ಬಳಕೆ ಮಾಡುವ ಸಲುವಾಗಿ  ಈ ಮೊಬೈಲನ್ನು ತಯಾರಿಸಲಾಗುತ್ತಿದೆ ಎಂದು ತಿಳಿದುಬಂದಿದೆ.

ಈ ಮೊಬೈಲನ್ನು ಅಲ್‌ ಮೊಹಮ್ಮದೀಯ ಸ್ಟೂಡೆಂಟ್ಸ್‌ (ಎಂಎಂಎಸ್‌) ವಿದ್ಯಾರ್ಥಿಗಳು ತಯಾರಿಸಿದ್ದು, ಈ ಮೊಬೈಲ್‌ನೊಳಗೆ  ನಿರ್ದಿಷ್ಟ ಚಿಪ್‌ ಅಳವಡಿಸಲಾಗಿದೆ. ಈ ಚಿಪ್ಪನ್ನು ಮೊಬೈಲ್‌ಗೆ ಅಳವಡಿಸಿದ ಕೂಡಲೆ ಟವರ್‌ ಜೊತೆ ಸಂಪರ್ಕ ಸಾಧಿಸಿ ತಾನು ಕಾಂಟ್ಯಾಕ್ಟ್ ಮಾಡಬೇಕಿರುವ ವ್ಯಕ್ತಿಗೆ ಕರೆ ಮಾಡಬಹುದಾಗಿದೆ. ಈ ಮೊಬೈಲ್‌ನಿಂದ ಮಾಡಿದ ಯಾವುದೇ ಕರೆಗಳನ್ನು ಭಾರತೀಯ ಗುಪ್ತಚರ ಇಲಾಖೆ ಅಧಿಕಾರಿಗಳು ಪತ್ತೆ ಮಾಡಲು ಸಾಧ್ಯವಿಲ್ಲ. ಒಂದು ವೇಳೆ ಕರೆ  ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದರೆ ಕೂಡಲೆ ಈ ಮೊಬೈಲ್‌ ಕರೆಯನ್ನು ಕಟ್‌ ಮಾಡಲಿದೆ.

ಮುಲ್ತಾನ್ ಮೂಲದ ಎಲ್ಇಟಿ ಭಯೋತ್ಪಾದಕ ಜೈಬುಲ್ಲಾ ಎಂಬಾತ ಎನ್ಐಎ ತನಿಖೆ ವೇಳೆ ಈ ಅಂಶವನ್ನು ಬಾಯ್ಬಿಟ್ಟಿದ್ದು, ಗುಪ್ತಚರ ಅಧಿಕಾರಿಗಳಿಗೆ ಈ ಸಮಸ್ಯೆ ಭಾರೀ ತಲೆನೋವಾಗಿ ಪರಿಣಮಿಸಿದೆ.

Leave a Reply

Your email address will not be published.

Social Media Auto Publish Powered By : XYZScripts.com