ಅಮಿತ್ ಶಾ v/s ಡಿಕೆಶಿ : ಬಾಹುಬಲಿಗಳ ಕಾದಾಟದಲ್ಲಿ ಕಮರಿದ ಪ್ರಜಾಪ್ರಭುತ್ವ….

ಇಡೀ ದೇಶವೇ ಕರ್ನಾಟಕವನ್ನು ಎದ್ದು ನೋಡುವಂತಹ ಬೆಳವಣಿಗೆಗೆ ರಾಜ್ಯ ಚುನಾವಣಾ ಫಲಿತಾಂಶ ಸಾಕ್ಷಿಯಾಗಿದೆ. ಅತಂತ್ರ ಚುನಾವಣಾ ಫಲಿತಾಂಶ ಬಂದ ಘಳಿಗೆಯಿಂದ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವವರೆಗೂ ನಡೆದ ತಂತ್ರ, ಕುತಂತ್ರ, ಪ್ರತಿತಂತ್ರಗಳನ್ನು ರಾಜ್ಯದ ಮತದಾರ ಎಂಜಾಯ್ ಮಾಡಿದ ಅಂದರೆ ತಪ್ಪಾಗಲಿಕ್ಕಿಲ್ಲ. ಫಲಿತಾಂಶ ಬಂದ ದಿನದಿಂದ ಇಂದಿನ ತನಕ ಆ ಮುಖದಲ್ಲಿ ದುಗುಡವಿಲ್ಲ, ಅಳುಕಿಲ್ಲ , ಬದಲಾಗಿ ವಿಶ್ವಾಸ ವಿತ್ತು‌. ವಿಧಾನಸೌಧದ ಒಳಗೂ ಹೊರಗೂ ಆ ಮುಖ ಅತ್ತಿಂದ ಇತ್ತ ಇತ್ತಿಂದ ಅತ್ತ ಕಣ್ಣು ಹಾಯಿಸುತ್ತಿತ್ತು. ಕಣ್ಣಿನಲ್ಲಿಯೇ ಶಾಸಕರಿಗೆ ಆತವಿಶ್ವಾಸ ಕೊಡುತ್ತಿತ್ತು.
ಇಡೀ ಬೆಳವಣಿಗೆಯಲ್ಲಿ ಅದರಲ್ಲೂ ಬಿಜೆಪಿಯ ಅಮೀತೋತ್ಸಾಹಕ್ಕೆ ಬ್ರೇಕ್ ಹಾಕಿದ್ದು ಅದೇ ಮುಖ.ಅದು ಬೇರೆ ಯಾರೂ ಅಲ್ಲ
ಕನಕಪುರದ ಅನಭಿಷಕ್ತ ದೊರೆ ,ಮಾಜಿ ಪವರ್ ಮಿನಿಸ್ಟರ್  ಡಿ.ಕೆ.ಶಿ.
ಹೌದು ಇಡೀ ಪ್ರಕರಣವನ್ನು ನಿಭಾಯಿಸಿದ್ದು ಡಿಕೆಶಿ ಬ್ರದರ್ಸ್. ಡಿ.ಕೆ.ಸುರೇಶ್ ಹೊರಗಿನ ವ್ಯವಹಾರಗಳನ್ನು
ನಿಭಾಯಿಸಿದರೆ ಡಿ.ಕೆ.ಶಿವಕುಮಾರ್ ಶಾಸಕರ ನಿಗಾ ವಹಿಸುವಿಕೆಯಲ್ಲಿ ಬ್ಯುಸಿ ಆಗಿದ್ದರು. ಫಲಿತಾಂಶ ಬಂದ ತಕ್ಷಣ ಮುಳುಬಾಗಿಲು ಮೀಸಲು ಕ್ಷೇತ್ರದ ಪಕ್ಷೇತರ ಶಾಸಕ ಎಚ್.ನಾಗೇಶ್ ರನ್ನು ಮತ ಎಣಿಕೆ ಕೇಂದ್ರದ ಬಳಿಯಿಂದಲೇ ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದು ಅವರ ಕಾರ್ಯತಂತ್ರದ ಮೊದಲ ಹೆಜ್ಜೆ‌. ಮಧ್ಯಾಹ್ನ ೧ ಘಂಟೆಯವರೆಗೂ ವಿಧಾನಸೌಧದ ಹೊರಗಡೆ ಸೇನಾಧಿಪತಿಯಂತೆ ನಿಂತಿದ್ದ ಡಿ.ಕೆ.ಶಿವಕುಮಾರ್ ಶಾಸಕ ಆನಂದ ಸಿಂಗ್ ಪ್ರತ್ಯಕ್ಷರಾದಾಗ ಅವರನ್ನು ವಿಧಾನಸೌಧದ ಒಳಗಡೆ ಕರೆದುಕೊಂಡು ಹೋದ ದೃಶ್ಯ ನೋಡಿದ ಆಪರೇಷನ್ ಕಮಲದ ಸೃಷ್ಠಿಕರ್ತರು ಕಂಗಾಲಾಗಿ ತಮ್ಮ ಆಸೆಗೆ ತಣ್ಣೀರೆರಚಿಕೊಂಡರು. ದೆಹಲಿಯಲ್ಲಿ ಕುಳಿತು ಈ ದೃಶ್ಯ ನೋಡಿದ ಬಿಜೆಪಿ ಚಾಣಾಕ್ಯ (?) ಅಮಿತ್ ಶಾ ಕುಳಿತಲ್ಲಿಯೇ ಕಂಪಿಸಿ ಬಿಟ್ಟರು. ಕಾಂಗ್ರೆಸ್ ಹಾಗೂ ಜೆಡಿಎಸ್ ಈ ಪರಿಯ ಯುದ್ಧೋನ್ಮಾದಕ್ಕೆ ಸ್ಚತಃ ಬಿಜೆಪಿಯೇ ಪ್ರೇರಣೆಯಾಗಿದ್ದು ಆ ಪಕ್ಷದ ದುರಂತ ಎನ್ನಬಹುದು. ಅದಕ್ಕೆ ಒಂದಿಷ್ಟು ಕಾರಣಗಳನ್ನು ಪಟ್ಟಿ ಮಾಡುತ್ತ ಹೋದರೆ ಅಸಲಿ ಆಟ ಗೊತ್ತಾಗುತ್ತದೆ.

2018 ರ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸೀಟು ಗೆದ್ದ ಮಾತ್ರಕ್ಕೆ ಉಳಿದ ಪಕ್ಷಗಳನ್ನು ತೀರಸ್ಕರಿಸಿದ್ದಾರೆ ಎಂದು ಬಿಜೆಪಿ ಹೇಳಿತ್ತು. ಆದರೆ  ಈ ಚುನಾವಣೆಯಲ್ಲಿ ಕಾಂಗ್ರೆಸ್ ಶೇ.37ರಷ್ಟು ಮತಗಳನ್ನು ಪಡೆದಿದೆ. ಬಿಜೆಪಿ ಶೇ.36ರಷ್ಟು  ಮತ ಪಡೆದುಕೊಂಡಿದೆ.ಅಂದ ಮೇಲೆ ಕಾಂಗ್ರೆಸ್‌ ನ್ನು ಬಿಜೆಪಿಗಿಂತ ಶೇ.1ರಷ್ಟು ಹೆಚ್ಚಿಗೆ ಜನ ಬೆಂಬಲಿಸಿದ್ದಾರೆ ಅಂತಾಯ್ತು. ಆದರೂ ಫಲಿತಾಂಶದ ಬಂದ ಮಧ್ಯಾಹ್ನ ಯಡಿಯೂರಪ್ಪ ನಾನು ದೆಹಲಿಗೆ ಹೋಗುತ್ತೇನೆ. ಪ್ರಮಾಣ ವಚನ ಸಮಾರಂಭಕ್ಕೆ ಮೋದಿ,ಅಮಿತ್ ಷಾ ಗೆ ಆಹ್ವಾನ ಕೊಟ್ಟು ಬರುತ್ತೇನೆ ಎಂದರು ಅವರ ಪಕ್ಷದ ಕಾರ್ಯಕರ್ತರು ಆಗಲೇ ವಿಜಯೋತ್ಸವದ ಉತ್ತುಂಗದಲ್ಲಿದ್ದರು.
ಇನ್ನು ಮೋದಿ ಬಿಜೆಪಿಗಷ್ಟೇ ಅಲ್ಲ ಎಲ್ಲರಿಗೂ ಅವರು  ಪ್ರಧಾನಿ. ಆದರೆ ಯಾವುದೇ ಕಾರಣಕ್ಕೂ ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಅಧಿಕಾರಕ್ಕೆ ಬಿಡುವದಿಲ್ಲ ಎಂದಿದ್ದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರನ್ನು ಕೆರಳಿಸಿತ್ತು.

ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ 2 ಸ್ಥಾನ ಬಂದಲ್ಲಿಯೇ ನಾವು ಅಧಿಕಾರ ಬಿಟ್ಟಿಲ್ಲ ಇನ್ನೂ  104 ಸ್ಥಾನ ಬಂದ್ರೆ ಬಿಡ್ತೀವಾ ಎಂದು ಅಹಂಕಾರದ ಮಾತಾಡಿದ್ದರು.
ರಾಜ್ಯಪಾಲರು ಬಹುಮತ ವಿಲ್ಲದಿದ್ದರೂ ದೊಡ್ಡ ಪಕ್ಷವೆಂಬ ಕಾರಣಕ್ಕೆ ಬಿಜೆಪಿ ಗೆ ಆಹ್ವಾನ ಕೊಟ್ಟಿದ್ದು. ಬಿಜೆಪಿ ನೇಮಕ ಮಾಡಿರುವ ಇತರೆ ರಾಜ್ಯಗಳಾದ ಗೋವಾ,ಆಸ್ಸಾಂ, ಮೀಜೋರಾಮ್ ಗಳಲ್ಲಿನ ರಾಜ್ಯಪಾಲರು ಇದೇ ರೀತಿ ಮಾಡಿರಲಿಲ್ಲ. ಅಂದ ಮೇಲೆ ಕೇಂದ್ರ ಸರ್ಕಾರದ ಕೈಗೊಂಬೆಗಳಂತೆ ಸಾಂವಿಧಾನಿಕ ಸಂಸ್ಥೆ ನಡೆದುಕೊಂಡಾಗ ಸುಪ್ರಿಂ ಕೋರ್ಟ್ ಮಧ್ಯ ಪ್ರವೇಶ ಮಾಡಬೇಕಾಯಿತು. ಅಲ್ಲದೇ ಬಹುಮತ ಸಾಬೀತು ಪಡಿಸಲು  15  ದಿನಗಳ ಕಾಲ ಅವಕಾಶ ನೀಡಿದ್ದು ಬಿಜೆಪಿ ಗೆ ಅನುಕೂಲ ಮಾಡಿಕೊಡಲೆಂದೆ ಎಂಬ ಅಂಶ ಕಾಂಗ್ರೆಸ್- ಜೆಡಿಎಸ್ ನವರನ್ನು ಮತ್ತಷ್ಟು ಹತ್ತಿರ ಸೇರಿಸಲು ಕಾರಣ ಆಗಿದ್ದು ಅಷ್ಟೋತ್ತಿಗಾಗಲೇ ಹೆಚ್ಚು ಸ್ಥಾನ ಇದ್ದರೂ ಕಾಂಗ್ರೆಸ್ ಬೇಷರತ್ತಾಗಿ ಜೆಡಿಎಸ್ ಗೆ ಬೆಂಬಲ ಘೋಷಣೆ ಮಾಡಿತ್ತು.

ಬಹಳ ಮುಖ್ಯವಾಗಿ ಬಿಜೆಪಿ ಆಪರೇಷನ್ ಕಮಲದಂತಹ ಕೆಟ್ಟ ಸಂಸ್ಕೃತಿಗೆ ಕೈ ಹಾಕಿದ್ದು. ಒಬ್ಬೊಬ್ಬರಿಗೆ ೧೦೦ ಕೋಟಿ ಆಮಿಷ ಹಾಕಿದರು. ಮತ್ತು ಅದನ್ನು ಬಹಳ ಹೆಮ್ಮೆಯಿಂದ ಬಿಜೆಪಿ ಪಕ್ಷದ ರಾಷ್ಟ್ರೀಯ ನಾಯಕರು ಹೇಳಿಕೊಂಡಿದ್ದು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅಧಿಕಾರ ಪಡೆಯಲು ಆಪರೇಷನ್ ಕಮಲ ಮಾಡುವದು ಚಾಣಕ್ಯ ತಂತ್ರವೆಂದು ಆ ಪಕ್ಷದ ಕಾರ್ಯಕರ್ತರು ಗುಣಗಾನ ಮಾಡಿದರು. ಆದರೆ ಅಮಿತ್ ಶಾ ನ ಈ ತಂತ್ರಕ್ಕೆ ರಣತಂತ್ರ ಹಾಕಿ ಕರ್ನಾಟಕದಲ್ಲಿ ಕಮಲ ಅರಳದಂತೆ ತಡೆದಿದ್ದು ಮಾತ್ರ ಡಿ.ಕೆ.ಶಿವಕುಮಾರ್. ತಾನೇ ಹೇಳಿಕೊಳ್ಳುವಂತೆ ಬಿಜೆಪಿ ಅಶ್ವಮೇಧದ ಕುದುರೆಯನ್ನು ಯಾರೂ ಬೇಕಾದರೂ ಕಟ್ಟಿ ಎಂದು ಸೆಡ್ಡು ಹೊಡೆದರೆ ಅದಕ್ಕೆ ಸರಿಯಾಗಿ ಆ ಅಶ್ವಮೇಧದ ಕುದುರೆ ಕರ್ನಾಟಕದ ಗಡಿಯಲ್ಲಿ ಎಂಟ್ರಿಯೇ ಆಗದಂತೆ ಓಡಿಸಿದ್ದು ಡಿ.ಕೆ.ಶಿವಕುಮಾರ್.

ಡಿಕೆಶಿ ಹೈಕಮಾಂಡ್ ನ ಆಪ್ತ ರಕ್ಷಕ.
ಹಾಗೆ ನೋಡಿದರೆ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಗೆ ಬೆಂಗಾವಲಾಗಿ ದಳಪತಿಯಾಗಿ ಶ್ರೀರಕ್ಷೆ ಕೊಟ್ಟಿದ್ದು ಇದೇ ಮೊದಲಲ್ಲ. ಕೆಲವೇ ತಿಂಗಳುಗಳ ಹಿಂದೆ ನಡೆದ ಗುಜರಾತ್ ರಾಜ್ಯ ಸಭಾ ಚುನಾವಣೆಯಲ್ಲಿಯೂ ಡಿ.ಕೆ.ಶಿ ಪಾತ್ರ ಮಹತ್ವದ್ದು.   2017 ರ ಜುಲೈ-ಆಗಸ್ಟ್‌ನಲ್ಲಿ ಗುಜರಾತ್ ನ 44 ಕಾಂಗ್ರೆಸ್ ಶಾಸಕರನ್ನು ರೆಸಾರ್ಟ್ ನಲ್ಲಿ ಇಟ್ಟು ಆದರಾತೀತ್ಯ‌ ನೀಡಿದರು. ಅಲ್ಲಿಯೂ ಕೂಡ ಈ ಬಿಹೆಪಿಯ ಚಾಣಕ್ಯ ಕಾಂಗ್ರೆಸ್ ನ ಬಹುತೇಕ ಶಾಸಕರನ್ನು ಖರೀದಿಸಿದ್ದ. ಉಳಿದ 44 ಶಾಸಕರನ್ನು ರಕ್ಷಿಸಿಕೊಳ್ಳುವದು ಗುಜರಾತ್ ಕಾಂಗ್ರೆಸ್ ಗೆ ಅಸಾಧ್ಯವಾಗಿತ್ತು. ಅಲ್ಲದೇ ಅಲ್ಲಿ ಅಭ್ಯರ್ಥಿಯಾಗಿದ್ದು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಅಹಮದ್ ಪಟೇಲ್ . ಅಹಮದ್ ಪಟೇಲ್ ಗೆಲ್ಲುವದು ಕಾಂಗ್ರಸ್ ಗೆ ಅನಿವಾರ್ಯ ಹಾಗೂ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಆಗ ಹೈಕಮಾಂಡ್  ಶಾಸಕರ ಉಸ್ತುವಾರಿಯನ್ನು ಡಿ.ಕೆ.ಶಿವಕುಮಾರ್ ಅವರಿಗೆ ಒಪ್ಪಿಸಿತ್ತು. ಆ ಕೆಲಸವನ್ನು ಒಪ್ಪಿಕೊಂಡ ಶಿವಕುಮಾರ್  ಶಾಸಕರನ್ನು ಸುರಕ್ಷಿತವಾಗಿ ಇಟ್ಟಕೊಂಡಿದ್ದರು.

ಆಗ ಡಿ.ಕೆ.ಶಿವಕುಮಾರ್ ಅವರ ಮೇಲೆ ಅವರ ಆಪ್ತರ ಮೇಲೆ, ಹಾಗೂ ಗುಜರಾತ್ ಶಾಸಕರು ತಂಗಿದ್ದ ರೆಸಾರ್ಟ್ ಮೇಲೆ ಐ.ಟಿ.ದಾಳಿ ನಡೆಯಿತು. ಶಿವಕುಮಾರ್ ಸೇರಿದಂತೆ ಅವರ ಕುಟುಂಬವನ್ನು ಐ.ಟಿ. ಇಲಾಖೆ ವಿಚಾರಣೆಗಳ ಮೇಲೆ ವಿಚಾರಣೆ ನಡೆಸಿತೂ. ಆದರೂ ಎಲ್ಲಿಯೂ ದೃತಿಗೆಡದ ಡಿ.ಕೆ.ಶಿ ಅದನ್ನೂ ಲೆಕ್ಕಿಸದೇ ಗುಜರಾತ್‌ ಶಾಸಕರನ್ನು ರಕ್ಷಿಸಿ ಕಾಂಗ್ರೆಸ್ ಗೆಲುವಿಗೆ ಕಾರಣರಾದರು. ಗುಜರಾತ್ ನಲ್ಲಿಯೇ  ಬಿಜೆಪಿ ಗೆ ದೊಡ್ಡ ಮಾಸ್ಟರ್ ಸ್ಟ್ರೋಕ್ ಕೊಟ್ಟಿದ್ದರು. ಅಮಿತ್ ಶಾ ಕುತಂತ್ರಕ್ಕೆ ಮೊದಲ ಪೆಟ್ಟು ಕೊಟ್ಟಿದ್ದ ಡಿ.ಕೆ.ಶಿ ಹೈಕಮಾಂಡ್ ಗೆ ಮತ್ತಷ್ಟು ಆಪ್ತರಾದರು.
2002 ರಲ್ಲಿ ಮಹಾರಾಷ್ಟ್ರದಲ್ಲಿ ಆಗಿನ ಮುಖ್ಯಮಂತ್ರಿ ದಿ‌.ವಿಲಾಸ್ ರಾವ್ ದೇಶಮುಖ ನೇತೃತ್ವದ ಸರ್ಕಾರಕ್ಕೆ ಬಹುಮತ ಸಾಬೀತು ಪಡಿಸುವ ಪರಿಸ್ಥಿತಿ ಬಂದಾಗ ಆಗಲೂ ಡಿ.ಕೆ.ಶಿವಕುಮಾರ್ ಅವರೇ ನೆರವಾಗಿದ್ದರು. ಮಹಾರಾಷ್ಟ್ರದ ಶಾಸಕರನ್ನು ಬೆಂಗಳೂರಿನ ರೆಸಾರ್ಟ್ ನಲ್ಲಿ ಉಳಿಸಿಕೊಂಡಿದ್ದರು. ಆಗ ದೇಶಮುಖ್ ಬಹುಮತ ಸಾಬೀತು ಪಡಿಸಿ ಶಿವಕುಮಾರ್ ಗೆ ಕೃತಜ್ಞತೆ ಸಲ್ಲಿಸಿದ್ದರು.

ಈ ಎಲ್ಲ ಕಾರಣಗಳಿಂದ ಈ ಬಾರಿಯೂ ಕಾಂಗ್ರಸ್ ಹೈ ಕಮಾಂಡ್ ಕಾಂಗ್ರೆಸ್ ಶಾಸಕರ ಉಸ್ತುವಾರಿಯನ್ನು ಡಿ.ಕೆ‌.ಶಿವಕುಮಾರ್ ಗೆ ಒಪ್ಪಿಸಿದ್ದು ಮತ್ತು ಅದರಲ್ಲಿ ಅವರು ಯಶಸ್ವಿಯಾದರು. ಕಾಂಗ್ರೆಸ್ ಶಾಸಕರನ್ನು ಸೆಳೆಯಲು ಖುದ್ದು ಅಮಿತ್ ಶಾ ದೆಹಲಿಯಿಂದ ಒಂದು ಟೀಂ ಕಳಿಸಿದ್ದರು. ಆರ್‌ಎಸ್‌ಎಸ್‌ನ ಪ್ರಾಡೆಕ್ಟ್ ರಾಮ ಮಾಧವ ಈ ಟೀಂ ಲೀಡರ್ ಆಗಿದ್ದು ಈ ಪಕ್ಷದ ಮತ್ತೊಂದು ಅದ್ ವಾನ. RSS ನ್ನು ಖರೀದಿಸುವ ಕೆಲಸಕ್ಕೆ ಬಳಸಿಕೊಂಡಿದ್ದು ವಿಪರ್ಯಾಸ.

ಮದಗಜಗಳ ಕಾದಾಟದಲ್ಲಿ ಮೌಲ್ಯಗಳ ಬಲಿ
ಕಾಡಿನಲ್ಲಿ ಎರಡು ಮದಗಜಗಳ ಕಾದಾಟ ನಡೆದಾಗ ಅಲ್ಲಿ ಅಪಾರ ವನ್ಯ ಸಂಪತ್ತು ನಾಶವಾಗುತ್ತೆ. ಹಾಗೆಯೇ ಕರ್ನಾಟಕದಲ್ಲಿ ನಡೆದ ಈ ಮದಗಜಗಳ ಆಟದಲ್ಲಿ ಮೌಲ್ಯ,ತತ್ವ ಸಿದ್ಧಾಂತ ಗಳು ಸಂಪೂರ್ಣ ನಾಶವಾಗಿ ಹೋದವು.. ಜನ ಪ್ರತಿನಿಧಿಯೊಬ್ಬರನ್ನು ಕೋಟಿ ಕೋಟು ಲೆಕ್ಕದಲ್ಲಿ ಖರೀದಿಸಲು ಬಿಜೆಪಿ ಗೆ ಹಣ ಎಲ್ಲಿಂದ ಬರುತ್ತೆ? ಕಪ್ಪು ಹಣ ವಾಪಸ್ ತರ್ತೇನೆ ಎಂದು ಹೇಳುವ ಪ್ರಧಾನಿಗಳಿಗೆ ಶಾಸಕರನ್ನು ಖರೀದಿಸುವದು ಭ್ರಷ್ಟಾಚಾರ ಎನ್ನಿಸುವದಿಲ್ಲವೇ ? ಬೇರೆ ಪಕ್ಷಗಳಿಗಿಂತ ನಮ್ಮ ಪಕ್ಷ ಭಿನ್ನ ಎಂದು ಹೇಳುವ ಬಿಜೆಪಿ ಪಕ್ಷಕ್ಕೆ  ಹಾಗೂ ಪ್ರಧಾನಿಯವರೆಗೆ ಇದು ಶೋಭೆ ತರುತ್ತದೆಯೆ ?
ಇನ್ನೂ ಒಂದು ಪಕ್ಷದ ಚಿಹ್ನೆಯಡಿ ಸ್ಪರ್ಧಿಸಿ ಗೆದ್ದು ಬಂದು ಮತ್ತೇ ಬೇರೆಯವರು ಕರೆದರೆ ಹಣಕ್ಕಾಗಿ ಆ ಪಕ್ಷದ ಜೊತೆ ಕೈ ಜೋಡಿಸುವವರು ಶಾಸಕರಾಗಲು ಯೋಗ್ಯರೆ ? ಇನ್ನೂ ವಾರಗಳ ಕಾಲ ಇಷ್ಟೆಲ್ಲ ಶಾಸಕರ ನ್ನು ಹಿಡಿದಿಟ್ಟುಕೊಳ್ಳುವದು ನ್ಯಾಯವಾ ? ಅವರ ಖರ್ಚು ವೆಚ್ಚಿಗೆ ಹಣದ ಮೂಲ ಯಾವುದು ? ಇದೆಲ್ಲ ಪ್ರಶ್ನೆಗಳಿಗೆ ಉತ್ತರ ಕೊಡುವ ಮೌಲ್ಯಾಧಾರಿತ ರಾಜಕಾರಣ ಸತ್ತು ಹೋಗಿ ಬಹಳ ವರ್ಷಗಳೆ ಕಳೆದು ಹೋಗಿವೆ.
ಹಾಗೆ ನೋಡಿದರೆ ಬಿಜೆಪಿಯ ಈ ಕೆಟ್ಟ ಆಪರೇಷನ್ ಸಂಸ್ಕೃತಿಗೆ ಕಡಿವಾಣ ಹಾಕುವದು ಅಗತ್ಯವಾಗಿತ್ತು ಅನಿಸುತ್ತೆ. ಯಾಕಂದ್ರೆ
2008 ರಲ್ಲಿಯೂ ಬಿಜೆಪಿ ಗೆ ಬಹುಮತ ಬಂದಿರಲಿಲ್ಲ.ಆಗ 5 ಪಕ್ಷೇತರ ಶಾಸಕರು ಬೆಂಬಲ ಕೊಟ್ಟಿದ್ದರೂ ಆ ಪಕ್ಷದವರಿಗೆ ನಂಬಿಕೆ ಇರಲಿಲ್ಲ.. ಆಗ ಹುಟ್ಟಿಕೊಂಡಿದ್ದೆ ಈ ಬಳ್ಳಾರಿ ಬಾಬುಗಳ ಆಪರೇಷನ ಕಮಲ ಎಂಬ ಕೆಟ್ಟ ಸಂಸ್ಕೃತಿ. ಸರಿ ಅದನ್ನೂ ಮಾಡಿಯಾದರೂ ಈ ಬಿಜೆಪಿ ಯವರು ನೆಟ್ಟಗೆ ಸರ್ಕಾರ ಮಾಡಲಿಲ್ಲ. ೫ ವರ್ಷದಲ್ಲಿ  ಕರ್ನಾಟಕದ ಮಾನವನ್ನು ಹರಾಜು ಮಾಡಿದರು‌.
ಆಗಲೂ ಕಾಂಗ್ರೆಸ್-ಜೆಡಿಎಸ್ ಮನಸ್ಸು ಮಾಡಿದ್ದರೆ ಅಧಿಕಾರ ಮಾಡಬಹುದಿತ್ತು.ಆದರೆ ಮಾಡಲಿಲ್ಲ.

ಕೊನೆಯದಾಗಿ ಸುದ್ದಿ ಮಾದ್ಯಮಗಳಿಗೆ ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಬೇಕು ಅಷ್ಟೇ..ಸುದ್ದಿ ಮಾಧ್ಯಮಗಳ ಬಗ್ಗೆ ದೂರುವವರು 2014ರ ಲೋಕಸಭಾ‌ ಚುನಾವಣೆ ಯಲ್ಲಿ ಮೋದಿ ಚಹ ಮಾರಿದ್ದರು ಅಂತ ಸುದ್ದಿ ಮಾಧ್ಯಮಗಳು ಪುಂಖಾನುಪುಂಖವಾಗಿ ಪ್ರಸಾರ ಮಾಡುತ್ತಿದ್ದಾಗ ಒಬ್ಬರಾದರೂ ಅದರ ಬಗ್ಗೆ ದಾಖಲೆ ಕೊಡಿ ಅಂತ ಕೇಳಿದ್ದರೆ ? ಚುನಾವಣಾ ಚಿತ್ರಣವೇ ಬದಲಾಗುತ್ತಿತ್ತು.

Leave a Reply

Your email address will not be published.

Social Media Auto Publish Powered By : XYZScripts.com