ರೈತರ ಸಾಲಮನ್ನಾ ಮಾಡುವ ವಿಷಯದಲ್ಲಿ HDK ಮೀನಮೇಷ ಸರಿಯಲ್ಲ : ಸಾಣೇಹಳ್ಳಿ ಸ್ವಾಮೀಜಿ

ಚಿತ್ರದುರ್ಗ : ಕುಮಾರಸ್ವಾಮಿ ನಡೆಗೆ ಸಾಣೇಹಳ್ಳಿಯ ಪಂಡಿತಾರಾಂಧ್ಯ ಶಿವಾಚಾರ್ಯ ಸ್ವಾಮೀಜಿಯ ಅಪಸ್ವರ ಎತ್ತಿದ್ದು ‘ ರೈತರ ಸಾಲಮನ್ನಾ ಮಾಡುವಲ್ಲಿ ಮೀನಾಮೇಷ ಸರಿಯಲ್ಲ. ಚುನಾವಣೆಯಲ್ಲಿ ಕೊಟ್ಟ ಭರವಸೆಯನ್ನು ಈಡೇರಿಸಬೇಕು. ರೈತರ ಸಾಲಮನ್ನಾ ಮಾಡಲು ಕುಮಾರಸ್ವಾಮಿ ಮುಂದಾಗಲಿ ‘ ಎಂದು ಹೇಳಿದ್ದಾರೆ.

‘ ರಾಜಕೀಯದಲ್ಲಿ ನಾಟಕೀಯ ಬೆಳವಣಿಗೆ ಸರಿಯಲ್ಲ. ಉಪಮುಖ್ಯಮಂತ್ರಿ ಸ್ಥಾನ ಸಂವಿಧಾನಿಕವಲ್ಲ. ಕುದುರೆ ವ್ಯಾಪಾರಕ್ಕೆ ಬಿಜೆಪಿ ಪ್ರಯತ್ನ ಮಾಡಿದ್ದು ಸರಿಯಲ್ಲ. ಈ ಬಾರಿ ಜನ ಯಾವುದೇ ಪಕ್ಷಕ್ಕೆ ಬಹುಮತ ನೀಡದೇ ಇರುವುದು ಬೇಸರ ತಂದಿದೆ. ಮುಂದಿನ ಬಾರಿಯಾದ್ರು ಮತದಾರರು ಯಾವುದಾದ್ರೂ ಪಕ್ಷಕ್ಕೆ ಬಹುಮತ ನೀಡಲಿ ‘ ಎಂದು ಶ್ರೀಗಳು ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com