ರಾಮನಗರ – ಚನ್ನಪಟ್ಟಣದವರು ನನ್ನ ತಂದೆತಾಯಿಗಳಿದ್ದಂತೆ, ಅವರ ಋಣ ನನ್ನ ಮೇಲಿದೆ : HDK

‘ ರಾಮನಗರ – ಚನ್ನಪಟ್ಟಣದವರು ನನ್ನ ತಂದೆತಾಯಿಗಳು ‘ ಎಂದು ನಿಯೋಜಿತ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ‘ ರಾಮನಗರದಲ್ಲಿ ಪ್ರಚಾರಕ್ಕೆ ಬಾರದೇ ಇದ್ದರು ಕೂಡ ಹೆಚ್ಚಿನ ಬಹುಮತ ಕೊಟ್ಟು ಗೆಲ್ಲಿಸಿದ್ದಾರೆ. ಎರಡು ಕ್ಷೇತ್ರದಲ್ಲೂ ಕೂಡ ಅಭೂತಪೂರ್ವವಾಗಿ ಗೆಲ್ಲಿಸಿದ್ದಾರೆ. ಎರಡು ಕ್ಷೇತ್ರದ ಋಣ ನನ್ನ ಮೇಲಿದೆ. ರಾಮನಗರಕ್ಕೆ ನನಗೆ ತಾಯಿಮಗನ ಸಂಬಂಧವಿದೆ. ಇವತ್ತು ಕೂಡ ಆ ಸಂಬಂಧಕ್ಕೆ ಧಕ್ಕೆ ಬಾರದ ಹಾಗೇ ನೋಡಿಕೊಳ್ಳುವೆ ‘ ಎಂದಿದ್ದಾರೆ.

‘ ಡಿ.ಕೆ.ಶಿವಕುಮಾರ್ ಗೆ ಡಿಸಿಎಂ ಪಟ್ಟ ಸಿಗದ ಹಿನ್ನೆಲೆ ಡಿ.ಕೆ.ಶಿ ಯಾರ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂಬ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಎಚ್ ಡಿಕೆ ‘ ನನಗೆ ಆ ವಿಚಾರದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಇದು ಕೇವಲ ಮಾಧ್ಯಮಗಳ ಸೃಷ್ಠಿ, ಈ ವಿಚಾರಕ್ಕೆ ಹೆಚ್ಚಿನ ಮಹತ್ವ ಬೇಡ ‘ ಎಂದು ರಾಮನಗರದ ಶಕ್ತಿದೇವತೆ ಶ್ರೀ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆಸಲ್ಲಿಸಿದ ಬಳಿಕ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com