ಶಾಮನೂರು ಶಿವಶಂಕರಪ್ಪ ಅವ್ರನ್ನ DCM ಮಾಡದಿದ್ರೆ ಪರಿಣಾಮ ಎದುರಿಸ್ತೀರಿ : HDK ಗೆ ದಿಂಗಾಲೇಶ್ವರ ಸ್ವಾಮೀಜಿ ಎಚ್ಚರಿಕೆ

ಗದಗ : ಜೆಡಿಎಸ್, ಕಾಂಗ್ರೆಸ್ ಮೈತ್ರಿ ಸರ್ಕಾರದ ರಚನೆಯಲ್ಲಿ ವೀರಶೈವ ಲಿಂಗಾಯತ ಸಮಾಜದ ಮುಖಂಡ, ಕಾಂಗ್ರೆಸ್ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅ ವರಿಗೆ ಡಿಸಿಎಂ ಹುದ್ದೆ ನೀಡದಿದ್ರೆ ಇನ್ನೂ ಹೆಚ್ಚಿನ ಕಹಿ‌ ಅನುಭವಿಸುತ್ತೀರಿ ಎಂದು ಕಾಂಗ್ರೆಸ್ ಪಕ್ಷಕ್ಕೆ ದಿಂಗಾಲೇಶ್ವರ ಸ್ವಾಮಿಜಿ ಎಚ್ಚರಿಕೆ ನೀಡಿದ್ದಾರೆ.

ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಬಾಲೆಹೊಸೂರ ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿಸಿಎಂ ಹುದ್ದೆ ಬಗ್ಗೆ ಕಾಂಗ್ರೆಸ್ ಪಕ್ಷ ಶಾಮನೂರ ಅವರಿಗೆ ಹಿರಿತನ, ಪಕ್ಷದಲ್ಲಿನ ರಾಜಕೀಯ ಅನುಭವ ಪರಿಗಣಿಸಿ ಉಪಮುಖ್ಯಮಂತ್ರಿ ಸ್ಥಾನ ನೀಡಿಬೇಕು. ಈ ಮೂಲಕ ಈಗಾಗಲೇ ವೀರಶೈವ ಲಿಂಗಾಯತ ಸಮಾಜ ಒಡೆದು, ಸಮಾಜ ಅಲಕ್ಷ್ಯ ಮಾಡಿದ್ದಕ್ಕೆ ಸಾಕಷ್ಟು ಕಹಿ ಉಂಡಿದ್ದೀರಿ. ಈಗ ಶಾಮನೂರ ಅವರನ್ನು ಡಿಸಿಎಂ ಮಾಡಿದ್ರೆ ಮುನಿಸಿಕೊಂಡ ಸಮಾಜ ಶಾಂತ ಮಾಡಿದ ಭಾವನೆ ಬಂದಂತಾಗುತ್ತದೆ. ಇಲ್ಲವಾದರೆ ಹೆಚ್ಚಿನ ಕಹಿ ಅನುಭವಿಸಬೇಕಾಗುತ್ತದೆ ಎಂದು ಕಾಂಗ್ರೆಸ್ ಪಕ್ಷದ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರಿಗೆ ಶ್ರೀಗಳು ಎಚ್ಚರಿಕೆ ನೀಡಿದ್ದಾರೆ. ಇನ್ನು ನೂತನ ಸಿ.ಎಂ ಆಗಲಿರುವ ಎಚ್ಡಿಕೆಗೆ ದಿಂಗಾಲೇಶ್ವರ ಶ್ರೀಗಳ ಪ್ರತ್ಯೇಕ ಲಿಂಗಾಯತ ಧರ್ಮ ಬಗ್ಗೆ ಸಲಹೆ ನೀಡಿದ್ದಾರೆ. ಪ್ರತ್ಯೇಕ ಧರ್ಮ ಆಗಬಾರದೆಂಬ ಕೂಗಿಗೆ ದೇವೇಗೌಡರು ಹಾಗೂ ಕುಮಾರಸ್ವಾಮಿ ದನಿಗೂಡಿಸಿದ್ದರು. ಅದರಂತೆ ಕುಮಾರಸ್ವಾಮಿ ಪ್ರತ್ಯೇಕತಾವಾದಿಗಳ ಕೂಗಿಗೆ ಬೆಲೆ ಕೊಡಬಾರದು. ಅಕಸ್ಮಾತ್ ಭವಿಷ್ಯದಲ್ಲಿ ಪ್ರತ್ಯೇಕತೆಯ ಬಗ್ಗೆ ಕೇಂದ್ರ ಸರ್ಕಾರ ಕೈ ಹಾಕಿದ್ರು ಅದಕ್ಕೂ ನಮ್ಮ ವಿರೋಧವಿದೆ. ರೈತರು ತೊಂದರೆಯಲ್ಲಿದ್ದಾರೆ, ರೈತರ ಬೆಳೆಗೆ ಸೂಕ್ತ ಬೆಲೆ ಸಿಗಬೇಕು. ರೈತರ ಸಾಲ ಮನ್ನಾ ಮಾಡುವ ಮೂಲಕ ರೈತ ಪರ ಸಿ.ಎಂ ಆಗುವಂತೆ ಕುಮಾರಸ್ವಾಮಿಗೆ ದಿಂಗಾಲೇಶ್ವರ ಸ್ವಾಮೀಜಿ ಸಲಹೆ ನೀಡಿದ್ದಾರೆ.

Leave a Reply

Your email address will not be published.