21ನೇ ವಯಸ್ಸಿಗೆ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ ಮಾಜಿ ಸಚಿವ ಬಂಡಾರು ದತ್ತಾತ್ರೇಯ ಅವರ ಪುತ್ರ

ಹೈದರಾಬಾದ್‌ : ಮಾಜಿ ಕೇಂದ್ರ ಸಚಿವ ಮತ್ತು ಬಿಜೆಪಿಯ ಸಂಸದ ಬಂಡಾರು ದತ್ತಾತ್ರೇಯ ಅವರ ಪುತ್ರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

21 ವರ್ಷದ ಬಂಡಾರು ವೈಷ್ಣವ್​ ಸಿಕಂದರಾಬಾದ್​ನಲ್ಲಿರುವ ಗುರು ನಾನಕ್​ ಆಸ್ಪತ್ರೆಯಲ್ಲಿ ಬುಧವಾರ ಬೆಳಗಿನ ಜಾವ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. 3ನೇ ವರ್ಷದ ಎಂಬಿಬಿಎಸ್​ ವಿದ್ಯಾರ್ಥಿಯಾಗಿದ್ದ ವೈಷ್ಣವ್​ ಮಂಗಳವಾರ ರಾತ್ರಿ ಕುಟುಂಬಸ್ಥರೊಂದಿಗೆ ಊಟ ಮಾಡುತ್ತಿದ್ದ ವೇಳೆ ಎದೆನೋವು ಕಾಣಿಸಿಕೊಂಡಿತ್ತು. ಅವರನ್ನು ಚಿಕಿತ್ಸೆಗಾಗಿ​ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಬೆಳಗ್ಗೆ 12.30ರ ಸುಮಾರಿಗೆ  ವೈಷ್ಣವ್‌  ಮೃತಪಟ್ಟಿದ್ದಾಗಿ ವೈದ್ಯರು ಕೈಚೆಲ್ಲಿದ್ದಾರೆ.

ಬಂಡಾರು ವೈಷ್ಣ ವ್‌ ಸಾವಿಗೆ ಗಣ್ಯಾತಿಗಣ್ಯರು ಸಂತಾಪ ಸೂಚಿಸಿದ್ದು,  ಮೃತನ  ಅಂತಿಮ  ನಮನಕ್ಕೆ ಆಗಮಿಸುತ್ತಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com