ಮೋದಿ ತವರು ವಾರಣಾಸಿಯಲ್ಲಿ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ ಬಿಜೆಪಿ ನಾಯಕ !!

ಅಹಮದಾಬಾದ್ : ಪ್ರಧಾನಿ ಮೋದಿ ಅವರ ತವರೂರಾದ ವಾರಣಾಸಿಯಲ್ಲಿ ಅತ್ಯಾಚಾರ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಪ್ರಕರಣ ಸಂಬಂಧ  ಬಿಜೆಪಿ  ನಾಯಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

32 ವರ್ಷದ ಮಹಿಳೆಯೊಬ್ಬರು ವಾರಣಾಸಿಯ ಭದೋಹಿ ಜಿಲ್ಲಾ ಘಟಕದ ಮಾಜಿ ಬಿಜೆಪಿ ಅಧ್ಯಕ್ಷ ಕನ್ನಯ್ಯಾ ಲಾಲ್ ಮಿಶ್ರಾರನ್ನು ಕೆಲಸ ಕೊಡಿಸುವಂತೆ ಮನವಿ ಮಾಡಿದ್ದರು.  ಇದಕ್ಕೆ ಒಪ್ಪಿದ್ದ ಮಿಶ್ರಾ ಮಹಿಳೆಯನ್ನು ಕೆಲಸ ಕೊಡಿಸಲು ಸರ್ಕಾರಿ ಅಧಿಕಾರಿಗಳೊಂದಿಗೆ ಮೀಟಿಂಗ್ ನಡೆಸುವುದಾಗಿ ಹೇಳಿ, ಲಾಡ್ಜ್‌ವೊಂದನ್ನು ಬುಕ್‌ ಮಾಡಿದ್ದರು. ಆ ಲಾಡ್ಜ್‌ಗೆ ಮಹಿಳೆಯನ್ನೂ ಬರಹೇಳಿದ್ದರು.

ಬಿಜೆಪಿ ನಾಯಕನ ಮಾತನ್ನು ನಂಬಿದ್ದ ಮಹಿಳೆ ಲಾಡ್ಜ್‌ ರೂಮಿನೊಳಗೆ ಹೋಗುತ್ತಿದ್ದಂತೆ ಆಕೆಯ ಮೇಲೆ ಮಿಶ್ರಾ ಲೈಂಗಿಕ ದೌರ್ಜನ್ಯ ನಡೆಸಿದ್ದ ಎಂದು ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಅಲ್ಲದೆ ಆತ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದಂತೆ ಕಿರುಚಿ ಅಲ್ಲಿಂದ ತಪ್ಪಿಸಿಕೊಂಡಿದ್ದಲ್ಲದೆ, ಕೂಡಲೆ ಪೊಲೀಸರಿಗೆ ದೂರು ನೀಡಿದ್ದಾರೆ.

ಮಹಿಳೆ ನೀಡಿದ್ದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸದ್ಯ ಮಿಶ್ರಾನನ್ನು ಬಂಧಿಸಿದ್ದಾರೆ.

 

Leave a Reply

Your email address will not be published.