ಕಾಂಗ್ರೆಸ್‌-ಜೆಡಿಎಸ್‌ ಲವ್‌ ಮ್ಯಾರೇಜ್‌ಗೆ ಇನ್ನು 6 ತಿಂಗಳಲ್ಲಿ ಡೈವರ್ಸ್ ಆಗುತ್ತೆ ನೋಡ್ತಾಯಿರಿ ಎಂದ ಬಿಜೆಪಿ ನಾಯಕ !

ಬೆಳಗಾವಿ : ಬಿಜೆಪಿಯ ಮಾಜಿ ಶಾಸಕ ಸಂಜಯ ಪಾಟೀಲ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ , ಜೆಡಿಎಸ್‌ ಲವ್ ಮ್ಯಾರೇಜ್ ಆಗ್ತಿದ್ದಾರೆ. ಈ ಲವ್ ಮ್ಯಾರೇಜ್ ಅನಧಿಕೃತವಾಗಿದೆ. ತಂದೆ,ತಾಯಿ ಒಪ್ಪಿಗೆ ಇಲ್ಲದ ಲವ್ ಮ್ಯಾರೇಜ್ ಇದಾಗಿದೆ. ಕರ್ನಾಟಕದ ಜನತೆಗೆ ಈ ಮೈತ್ರಿ ಸರ್ಕಾರ ಒಪ್ಪಿಗೆ ಇಲ್ಲ ಎಂದು ಸಂಜಯ್‌ ಪಾಟೀಲ್‌ ಹೇಳಿದ್ದಾರೆ.


ಕುಮಾರಸ್ವಾಮಿ ವಚನ ಭ್ರಷ್ಟ ಎನ್ನುವುದು ಜಗತ್ತಿಗೆ ಗೊತ್ತಿದೆ ಎಂದಿರುವ ಅವರು, ಸಿದ್ದರಾಮಯ್ಯ ಮೋಸಗಾರ ಎನ್ನುವುದು ಜಗತ್ತಿಗೆ ಗೊತ್ತಿದೆ. ಡಿ.ಕೆ.ಶಿವಕುಮಾರ್ ಅಂತಹ ದೊಡ್ಡ ಕಳ್ಳ ದೇಶದಲ್ಲಿ ಯಾರು ಇಲ್ಲ. ಇವತ್ತು ಎಲ್ಲಾ ಕಳ್ಳರು ಸೇರಿ ಬಿಜೆಪಿ ದೂರವಿಟ್ಟು ಸರ್ಕಾರ ರಚನೆ ಮಾಡುತ್ತಿದ್ದಾರೆ. ಕಾಂಗ್ರೆಸ್, ಜೆಡಿಎಸ ಲವ್ ಮ್ಯಾರೇಜ್ 6 ತಿಂಗಳಲ್ಲಿ ಡೈವರ್ಸ್ ಆಗುತ್ತೆ. ಮತ್ತೆ ರಾಜ್ಯದಲ್ಲಿ ಬಿಎಸ್‌ವೈ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಸಂಜಯ ಪಾಟೀಲ್ ಭವಿಷ್ಯ ನುಡಿದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com