ಮೋದಿ ಎಂಬ ಸಿಂಹವನ್ನು ಅಡ್ಡಗಟ್ಟಲು ಇಂದು ನಾಯಿ, ನರಿಗಳೆಲ್ಲ ಒಂದಾಗಿವೆ : ನಟ ಜಗ್ಗೇಶ್‌

ಬೆಂಗಳೂರು : ಮೋದಿ ಎಂಬ ಸಿಂಹವವನ್ನು ಅಡ್ಡ ಗಟ್ಟಲು ರಾಜ್ಯದಲ್ಲಿ ನಾಯಿ, ನರಿ, ಜಿಗಣೆಗಳೆಲ್ಲವೂ ಒಟ್ಟು ಸೇರಿವೆ ಎಂದು ನಟ ಜಗ್ಗೇಶ್‌ ಕಿಡಿ ಕಾರಿದ್ದಾರೆ.

ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ವಿರೋಧಿಸಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸುತ್ತಿದ್ದು, ಈ ವೇಳೆ ಮಾತನಾಡಿದ ಜಗ್ಗೇಶ್‌, ಬಿಜೆಪಿಗೆ ಮತ ನೀಡಿ ಏಕಪಕ್ಷೀಯವಾಗಿ ಹೊರತಂದಿದ್ದೀರಿ. ಆದರೆ ವಾಮಮಾರ್ಗದಿಂದ ನಮ್ಮನ್ನು ಸೋಲಿಸಲು ಜೆಡಿಎಸ್‌-ಬಿಜಿಪೆ ಒಂದಾಗಿದೆ. ಕಾರ್ಯಕರ್ತರ ಬೆವರಿನ ಹನಿಗೆ ಬೆಲೆ ಕೊಡದ ಮೈತ್ರಿ ಸರ್ಕಾರಕ್ಕೆ ನನ್ನ ಧಿಕ್ಕಾರವಿದೆ ಎಂದು ಕಿಡಿಕಾರಿದ್ದಾರೆ.

ಮೋದಿಯೆಂಬ ಸಿಂಹವನ್ನು ಅಡ್ಡಗಟ್ಟಲು ನಾಯಿ, ನರಿ, ಜಿಗಣೆಗಳೆಲ್ಲ ಒಟ್ಟಿಗೆ ಸೇರಿರುವ ಕಾರ್ಯಕ್ರಮಗಳನ್ನು ನಾವು ನೋಡುತ್ತಿದ್ದೇವೆ. ನಿರುದ್ಯೋಗಿ ಸಂಸ್ಥೆಗಳು ಮೋದಿಯವರ ಹೊಡೆತಗಳನ್ನು ತಾಳಲಾರದೆ ಮೂಲೆಗುಂಪಾದ ಎಲ್ಲರೂ ಇಂದು ಒಂದು ವೇದಿಕೆಯಲ್ಲಿ ಸೇರಿ ಮೋದಿಯನ್ನು ಮಣಿಸಲು ನಾವಿದ್ದೇವೆ ಎಂಬ ಭ್ರಮೆ ಹಾಗೂ ಚಿಂತನೆಯಿಂದ ಬಂದು ನಿಂತಿದ್ದಾರೆ. ಇಂದು ಈ ನಾಡಿನ ಜನತೆಯ ಪರವಾಗಿ ಹೇಳುತ್ತಿದ್ದೇವೆ, ನಿಮಗೂ ಕೂಡ ಬಿಜೆಪಿಗೆ ಆದಂತಹ ಮುಖಭಂಗ ಇನ್ನೂ ಮೂರು ತಿಂಗಳಲ್ಲಿ ಆಗಿಲ್ಲವೆಂದಲ್ಲಿ ಬೃಂದಾವನದಲ್ಲಿ ರಾಯರಿಲ್ಲ ಎನ್ನುತ್ತೇನೆ ಎಂದು ಸವಾಲು ಎಸೆದಿದ್ದಾರೆ.

One thought on “ಮೋದಿ ಎಂಬ ಸಿಂಹವನ್ನು ಅಡ್ಡಗಟ್ಟಲು ಇಂದು ನಾಯಿ, ನರಿಗಳೆಲ್ಲ ಒಂದಾಗಿವೆ : ನಟ ಜಗ್ಗೇಶ್‌

Leave a Reply

Your email address will not be published.