ಕುಮಾರನ ಪಟ್ಟಾಭಿಷೇಕಕ್ಕೆ ಮಳೆರಾಯನ ಅಡ್ಡಿ : ಬ್ಯಾಂಕ್ವೆಟ್‌ ಹಾಲ್‌ಗೆ ಶಿಫ್ಟಾದ ಗಣ್ಯರು

ಬೆಂಗಳೂರು : ಇಂದು ಸಂಜೆ 4.30ಕ್ಕೆ ಕುಮಾರಸ್ವಾಮಿಯವರು ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ವಿಧಾನಸೌಧದೆದುರು ಸಮಾರಂಭಕ್ಕೆ ಎಲ್ಲಾ ರೀತಿಯ ಸಿದ್ಧತೆಗಳು ನಡೆದಿದ್ದು, ಈ ಮಧ್ಯೆ ಮಳೆರಾಯ ಕಾರ್ಯಕ್ರಮಕ್ಕೆ ಅಡ್ಡಿ ಪಡಿಸಿದ್ದಾನೆ.

ಕಾರ್ಯಕ್ರಮಕ್ಕೆ ಹಾಕಿದ್ದ ಫ್ಲೆಕ್ಸ್‌ ಬ್ಯಾನರ್‌ಗಳನ್ನು ಕಿತ್ತು , ಕಾರ್ಯಕರ್ತರು ಮಳೆಯಿಂದ ರಕ್ಷಣೆ ಪಡೆಯುತ್ತಿದ್ದಾರೆ. ಇನ್ನು ಪೊಲೀಸರು ಮಳೆಯ ನಡುವೆಯೇ ಕೆಲಸ ನಿರ್ವಹಿಸುತ್ತಿದ್ದಾರೆ.

ವಿಧಾನಸೌಧದೆದುರು ಪ್ರಮಾಣವಚನ ಕಾರ್ಯಕ್ರಮಕ್ಕೆ ಎಲ್ಲಾ ರೀತಿಯ ಸಿದ್ಧತೆ ನಡೆದಿತ್ತು. ಆದರೆ ಮಳೆಯ ಆರ್ಭಟ ಹೆಚ್ಚಾದ ಕಾರಣ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ಬ್ಯಾಂಕ್ವೆಟ್‌ ಹಾಲ್‌ಗೆ ಶಿಫ್ಟ್‌ ಆಗಿದೆ. ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಗಣ್ಯರಿಗೆ ಮಾತ್ರ ಅವಕಾಶವಿರಲಿದ್ದು, ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ.

 

Leave a Reply

Your email address will not be published.

Social Media Auto Publish Powered By : XYZScripts.com