ಭಯ ಪಡಬೇಡಿ ರೈತರೇ…. ಸಾಲಮನ್ನಾ ವಿಚಾರದಲ್ಲಿ ನಾನು ಯೂಟರ್ನ್‌ ಹೊಡೆದಿಲ್ಲ : HDK

ಬೆಂಗಳೂರು : ನಾನು ರೈತರ ಸಾಲ‌ಮನ್ನಾ ವಿಷಯದಲ್ಲಿ ಯಾವುದೇ ಯೂ ಟರ್ನ್ ತೆಗೆದುಕೊಂಡಿಲ್ಲ. ಆದರೆ ಸಾಲ ಮನ್ನಾ ಘೋಷಣೆಗೆ ಮುನ್ನ ನನ್ನ ಸಹವರ್ತಿ ಪಕ್ಷದೊಂದಿಗೆ ಮಾತುಕತೆ ನಡೆಸಬೇಕಾಗುತ್ತದೆ ಎಂದು ನಿಯೋಜಿತ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

ನನ್ನ‌ ಪಕ್ಷದ ಕಾರ್ಯಕ್ರಮಗಳ ಜಾರಿಗೂ ಮುನ್ನ ಕಾಂಗ್ರೆಸ್ ನಾಯಕರ ಜತೆ ಮಾತುಕತೆ ಮಾಡಬೇಕಾಗುತ್ತದೆ. ರೈತರು ಆತಂಕ ಪಡುವ ಅಗತ್ಯವಿಲ್ಲ.ರಾಷ್ಟ್ರೀಕೃತ ಬ್ಯಾಂಕ್ ಮಾತ್ರವಲ್ಲ ಖಾಸಗಿಯವರ ಬಳಿಯೂ ರೈತರು ಮಾಡಿರುವ ಸಾಲ ಮನ್ನಾ ಮಾಡುವ ಚಿಂತನೆ ಇದೆ. ನಾನು ಅವಕಾಶವಾದಿ ರಾಜಕಾರಣಕ್ಕಾಗಿ ಮುಖ್ಯಮಂತ್ರಿ ಆಗುತ್ತಿಲ್ಲ. ಜನ‌ಬೆಂಬಲ ಕೊಡದೇ ಇದ್ದರೂ ದೇವರ ದಯೆಯಿಂದ ಸಿಎಂ ಆಗುತ್ತಿದ್ದೇನೆ. ನಾಳೆ ನಾನು ಮತ್ತು ಕಾಂಗ್ರೆಸ್ ನಿಂದ ಒಬ್ಬರು ಉಪಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸುತ್ತೇವೆ. ಮೇ 25ರಂದು ಸ್ಪೀಕರ್ ಮತ್ತು ಡೆಪ್ಯೂಟಿ ಸ್ಪೀಕರ್ ಆಯ್ಕೆ ನಡೆಯುತ್ತದೆ. ಮಧ್ಯಾಹ್ನದ ನಂತರ ಅಂದೇ ವಿಶ್ವಾಸ ಮತ ಪಡೆಯುವುದಾಗಿ ಹೇಳಿದ್ದಾರೆ.
ನಾನು ನನ್ನ ಅವಧಿಯಲ್ಲಿ ಸರ್ಕಾರಿ ಬಂಗಲೆ ಬಳಸದೇ ಇರಲು ನಿರ್ಧರಿಸಿದ್ದೇನೆ. ಜೆ.ಪಿ.ನಗರದ ನಿವಾಸವನ್ನೇ ಬಳಸುತ್ತೇನೆ. ದುಂದು ವೆಚ್ವಕ್ಕೆ ಕಡಿವಾಣ ಹಾಕುವುದು ನನ್ಮ ಉದ್ದೇಶ. ನನ್ನ ಮಾದರಿಯನ್ನೇ ಉಳಿದ ಸಚಿವರು ಅನುಸರಿಸಲಿ ಎಂಬುದು ನಮ್ಮ ಬಯಕೆ. 25 ವರ್ಷಗಳ ಹಿಂದೆ ಜೆ.ಪಿ.ನಗರ ನಿವಾಸ ನಿರ್ಮಾಣ ಮಾಡಿದೆ. ಅದರಿಂದ ನಿಶ್ಚಿತವಾಗಿ ಒಳ್ಳೆಯದಾಗಿದೆ. ನಾನು ನನ್ನ ಆರೋಗ್ಯದ ಬಗ್ಗೆ ನಿಗಾ ವಹಿಸಲು ವೈದ್ಯರು ಸೂಚಿಸಿದ್ದಾರೆ. ಜನರ ಮಧ್ಯೆ ಇದ್ದರೆ ಮಾತ್ರ ನಾನು ಆರೋಗ್ಯವಾಗಿರುತ್ತೇನೆ. ಹಾಗಾಗಿ ಗ್ರಾಮವಾಸ್ತವ್ಯದಂತಹಾ ಕಾರ್ಯಕ್ರಮ ಮುಂದುವರಿಸುತ್ತೇನೆ ಎಂದಿದ್ದಾರೆ.

Leave a Reply

Your email address will not be published.