ಬಾಡಿಗಾರ್ಡ್‌ಗಳ ಕಣ್ತಪ್ಪಿಸಿ ಬಾಲಿವುಡ್‌ ಬೆಡಗಿ ಸುಶ್ಮಿತಾ ಸೇನ್‌ಗೆ ಬಾಲಕನೊಬ್ಬ ಈ ರೀತಿ ಮಾಡಿದ್ದನಂತೆ !!

ಬಾಲಿವುಡ್ ಸೆಲೆಬ್ರಿಟಿಗಳು ತಮ್ಮ ರಕ್ಷಣೆಗಾಗಿ ಬಾಡಿಗಾರ್ಡ್ ಗಳನ್ನು ನೇಮಿಸಿಕೊಂಡಿರುತ್ತಾರೆ. ಸಾರ್ವಜನಿಕ ಸಮಾರಂಭಗಳಿಗೆ ತೆರಳಿದ ವೇಳೆ ಅಭಿಮಾನಿಗಳಿಂದ ಸೆಲೆಬ್ರಿಟಿಗಳನ್ನು ರಕ್ಷಿಸುವುದು ಬಾಡಿಗಾರ್ಡ್‌ಗಳ ಕೆಲಸ.

ಇಷ್ಟೆಲ್ಲಾ ರಕ್ಷಣೆ ಇದ್ದರೂ ಕೆಲವೊಮ್ಮೆ ಕಿಡಿಗೇಡಿಗಳು ಅನುಚಿತವಾಗಿ ವರ್ತಿಸುವುದುಂಟು. ಅಂತಹುದೇ ಘಟನೆಯೊಂದನ್ನು ಬಾಲಿವುಡ್‌ನ ಖ್ಯಾತ ನಟಿ ಸುಶ್ಮಿತಾ ಸೇನ್ ಮಾಧ್ಯಮವೊಂದರ ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದಾರೆ.

ಆರು ತಿಂಗಳ ಹಿಂದೆ ನಾನು ಪ್ರಶಸ್ತಿ ವಿತರಣಾ ಸಮಾರಂಭವೊಂದರಲ್ಲಿ ಪಾಲ್ಗೊಂಡಿದ್ದೆ. ಸಮಾರಂಭದ ಬಳಿಕ ಹೊರ ಬರುವ ವೇಳೆ ಅಭಿಮಾನಿಗಳು ಸುತ್ತುವರಿದಿದ್ದರು. ನನ್ನ ರಕ್ಷಣೆಗೆ ಹತ್ತು ಮಂದಿ ಬಾಡಿಗಾರ್ಡ್ ಗಳಿದ್ದರೂ ಸಮಯ ಸಾಧಿಸಿದ ಕಿಡಿಗೇಡಿಯೊಬ್ಬ ಹಿಂದಿನಿಂದ ಅನುಚಿತವಾಗಿ ಸ್ಪರ್ಶಿಸಿದ್ದ. ಆದರೆ ಅನುಚಿತ ಸ್ಪರ್ಶದ ಅರಿವು ನನಗೆ ಆಗುತ್ತಿದ್ದಂತೆ ಕಿಡಿಗೇಡಿಯ ಕೈಗಳನ್ನು ಹಿಡಿದುಕೊಂಡೆ. ಬಳಿಕ ಹಿಂದೆ ತಿರುಗಿದ ನನಗೆ ಆಘಾತವಾಗಿತ್ತು.  ನನ್ನನ್ನು  ಸ್ಪರ್ಶಿಸಿದವನು ಕೇವಲ ಹದಿನೈದು ವರ್ಷದ ಬಾಲಕನಾಗಿದ್ದ ಎಂದು ತಮಗಾದ ಕಹಿ ಅನುಭವವನ್ನು ಬಿಚ್ಚಿಟ್ಟಿದ್ದಾರೆ.

ಆತನನ್ನು ತರಾಟೆಗೆ ತೆಗೆದುಕೊಂಡ ನಾನು, ಈ ಸಂಗತಿಯನ್ನು ಹೇಳಿದರೆ ಪರಿಣಾಮ ಏನಾಗುತ್ತದೆ ಗೊತ್ತಾ…? ಎಂದು ಕೇಳಿದೆ. ಮೊದ ಮೊದಲು ತಾನು ಅಂತಹ ಕೃತ್ಯ ಮಾಡಿಲ್ಲವೆಂದು ಹೇಳಿದ ಬಾಲಕ, ಬಳಿಕ ತಪ್ಪೊಪ್ಪಿಕೊಂಡಿದ್ದ. ಆತ ಇನ್ನೂ ಚಿಕ್ಕ ವಯಸ್ಸಿನವನು ಎಂಬ ಕಾರಣಕ್ಕೆ ತಾವು ಕ್ಷಮಿಸಿದ್ದಾಗಿ ಸುಶ್ಮಿತಾ ಹೇಳಿದ್ದಾರೆ.

Leave a Reply

Your email address will not be published.