Odisha : ಸುಂದರ್ ಗಢ್ ಕಾಡಿನಲ್ಲಿ ಕಾಣಿಸಿಕೊಂಡ ಅಪರೂಪದ ಕರಿ ಚಿರತೆ..!
ಓಡಿಸ್ಸಾ ರಾಜ್ಯದ ಸುಂದರ ಗಢ್ ಅರಣ್ಯ ಪ್ರದೇಶದಲ್ಲಿ ಅತ್ಯಂತ ಅಪರೂಪವೆಂದು ಪರಿಗಣಿಸಲ್ಪಟ್ಟಿರುವ ಕರಿ ಚಿರತೆ (ಬ್ಲ್ಯಾಕ್ ಪ್ಯಾಂಥರ್) ಕಾಣಿಸಿಕೊಂಡಿದೆ. ಸುಂದರ್ ಗಢ್ ಕಾಡಿನಲ್ಲಿ ಇದೇ ಮೊದಲ ಬಾರಿಗೆ ಕರಿಚಿರತೆಯೊಂದು ಪತ್ತೆಯಾಗಿದೆ ಎಂದು ಓಡಿಸ್ಸಾ ಅರಣ್ಯ ಇಲಾಖೆ ಹೇಳಿದೆ.
‘ ಬ್ಲ್ಯಾಕ್ ಪ್ಯಾಂಥರ್ ಅಥವಾ ಮೆಲನಿಸ್ಟಿಕ್ ಲೆಪರ್ಡ್ ಎಂದು ಕರೆಯಲ್ಪಡುವ ಕರಿಚಿರತೆ ಕಾಡಿನಲ್ಲಿ ಅಲೆಯುತ್ತಿದ್ದಾಗ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದೆ ‘ ಎಂದು ವನ್ಯಜೀವಿ ಹಾಗೂ ಅರಣ್ಯ ಸಂರಕ್ಷಣಾ ವಿಭಾಗದ ಮುಖ್ಯ ಅಧಿಕಾರಿ ಎಚ್.ಕೆ ಬಿಸ್ಟ್ ತಿಳಿಸಿದ್ದಾರೆ.
ಭಾರತದ ಇತರ ರಾಜ್ಯಗಳಾದ ಕರ್ನಾಟಕ, ಕೇರಳ, ಛತ್ತೀಸ್ ಗಢ, ಮಹಾರಾಷ್ಟ್ರ, ತಮಿಳುನಾಡು, ಅಸ್ಸಾಂ, ಅರುಣಾಚಲ ಪ್ರದೇಶ ಹಾಗೂ ಗೋವಾದಲ್ಲಿ ಈ ಹಿಂದೆ ಕಾಣಿಸಿಕೊಂಡಿವೆ. ಇದೀಗ ಓಡಿಸ್ಸಾ ಈ ಸಾಲಿಗೆ ಸೇರಿಕೊಂಡಿದ್ದು, ಕರಿಚಿರತೆ ಕಾಣಿಸಿಕೊಂಡ ಭಾರತದ 9ನೇ ರಾಜ್ಯ ಎನಿಸಿಕೊಂಡಿದೆ.