ಕುಮಾರಸ್ವಾಮಿ ಪಟ್ಟಾಭಿಷೇಕಕ್ಕಾಗಿ 11 ವರ್ಷದಿಂದ ಕ್ಷೌರಿಕನ ಮುಖ ನೋಡದ ಅಭಿಮಾನಿ !

ಮೈಸೂರು : ಜಾತ್ಯಾತೀತ ಜನತಾದಳದ ರಾಜ್ಯಾಧ್ಯಕ್ಷ ಎಚ್‌. ಡಿ ಕುಮಾರಸ್ವಾಮಿಯವರೇ ಮುಖ್ಯಮಂತ್ರಿಯಾಗಬೇಕು ಎಂದು ವ್ಯಕ್ತಿಯೊಬ್ಬ 11 ವರ್ಷದಿಂದ ತಲೆ ಕೂದಲು ಮತ್ತು ಗಡ್ಡ ತೆಗೆಸದೆ ಹರಕೆ ಹೊತ್ತಿರುವ ಸಂಗತಿ ಬೆಳಕಿಗೆ ಬಂದಿದೆ.

ಮೈಸೂರು ಜಿಲ್ಲೆ ಕೆ.ಆರ್ ನಗರ ತಾಲ್ಲೂಕಿನ ಮೇಲೂರು ಗ್ರಾಮದ ನಿವಾಸಿ ರಾಮಕೃಷ್ಣೇಗೌಡ ಎಂಬುವವರು 11 ವರ್ಷದ ಹಿಂದೆ ಕುಮಾರಸ್ವಾಮಿ ಸಿಎಂ ಆಗುವವರೆಗೂ ಕಟಿಂಗ್ ಶೇವಿಂಗ್ ಮಾಡಿಸುವುದಿಲ್ಲವೆಂದು ಹರಕೆ ಹೊತ್ತಿದ್ದರಂತೆ. ಈಗ ಕುಮಾರಸ್ವಾಮಿ ಮುಖ್ಯಮಂತ್ರಿಯಾಗುತ್ತಿರುವ ಹಿನ್ನೆಲೆಯಲ್ಲಿ ಹರಕೆಯಂತೆ ಈಗ ಕಾಶಿಗೆ ತೆರಳಿ ಹರಕೆ ತೀರಿಸಲಿದ್ದಾರೆ.

Leave a Reply

Your email address will not be published.