ರಾಜ್ಯಕ್ಕೂ ಕಾಲಿಟ್ಟ ನಿಫಾ ವೈರಸ್ : ಮಂಗಳೂರಿನ ಇಬ್ಬರಿಗೆ ಸೋಂಕು ತಗುಲಿರುವ ಶಂಕೆ

ರಾಜ್ಯದಲ್ಲಿ ಮೊದಲ ಬಾರಿಗೆ ಕರಾವಳಿ ಪ್ರದೇಶವಾದ ಮಂಗಳೂರಿನಲ್ಲಿ ಇಬ್ಬರಿಗೆ ನಿಫಾ ವೈರಸ್‌ ಸೋಂಕು ಕಾಣಿಸಿಕೊಂಡಿರುವುದಾಗಿ ತಿಳಿದುಬಂದಿದೆ.

ಮಂಗಳೂರಿನಲ್ಲಿ ದಾಖಲಾಗಿದ್ದ ಕೇರಳ ವ್ಯಕ್ತಿ ಹಾಗೂ ಮಂಗಳೂರು ಮೂಲದ ಇಬ್ಬರು ಚಿಕಿತ್ಸೆ ಸಲುವಾಗಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ ವೇಳೆಯಲ್ಲಿ, ನಿಫಾ ವೈರಸ್ ಸೊಂಕು ಇರುವ ಬಗ್ಗೆ ವೈದ್ಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಕೂಡಲೇ ಎಚ್ಚೆತ್ತು ಕೊಂಡ ಆಸ್ಪತ್ರೆ ವೈದ್ಯರು ಇಬ್ಬರನ್ನು ವಿಶೇಷ ವಾರ್ಡ್ ಗೆ ಶಿಫ್ಟ್ ಮಾಡಿ, ರಕ್ತದ ಮಾದರಿಯನ್ನು ಮಣಿಪಾಲ್ ಆಸ್ಪತ್ರೆಗೆ ಪರೀಕ್ಷೆ ಸಲುವಾಗಿ ಕಳುಹಿಸಿಕೊಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ಇನ್ನು ಮಣಿಪಾಲ್ ಆಸ್ಪತ್ರೆಗೆ ಕಳುಹಿಸಲಾಗಿರುವ ಇಬ್ಬರ ರಕ್ತದ ಸ್ಯಾಂಪಲ್ ನಲ್ಲಿ ಒಂದು ವೇಳೆ ಸೋಂಕು ಕಂಡುಬಂದಲ್ಲಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ ಪುಣೆಗೆ ಹೆಚ್ಚಿನ ತಪಾಸಣೆಗಾಗಿ ರಕ್ತದ ಸ್ಯಾಂಪಲ್ ಅನ್ನು ಕಳುಹಿಸಿಕೊಡಲಾಗುವುದು ಎಂದೂ ಹೇಳಲಾಗುತ್ತಿದೆ.

Leave a Reply

Your email address will not be published.