ಸೀನಿಯರ್‌ Loves ಜೂನಿಯರ್‌ : ಇದು ‘ಅವನು’ ಮತ್ತು ‘ಅವನ’ ನಡುವಿನ ಡಿಫರೆಂಟ್‌ ಲವ್‌ ಸ್ಟೋರಿ !

ಕಾರವಾರ : ನನ್ನ ಪ್ರಿಯಕರನನ್ನ ಹುಡುಕಿಕೊಡಿ. ಆತ ನನ್ನ ಪ್ರೀತಿಸುತ್ತಿದ್ದಾನೋ ಇಲ್ಲವೋ ಎನ್ನುವುದು ಅವನಿಂದ ಹೇಳಿಸಿ ಎಂದು ಮಹಿಳೆಯ ವೇಷ ತೊಟ್ಟ ಯುವಕನೊಬ್ಬ ಇನ್ನೊಬ್ಬ ಯುವಕನ ಹುಡುಕಾಟಕ್ಕೆ ಪೊಲೀಸರ ಬಳಿ ಬೇಡಿಕೆ ಇಟ್ಟ ವಿಚಿತ್ರ ಘಟನೆ ಕಾರವಾರ ನಗರ ಠಾಣೆಯಲ್ಲಿ ನಡೆದಿದೆ.
ಮೂಲತಃ ತುಮಕೂರು ಜಿಲ್ಲೆಯ ಪಾವಗಡದ ಎಂ.ಟೆಕ್ ಪದವೀಧರ ಯುವಕ ಈ ಬೇಡಿಕೆ ಇಟ್ಟಿದ್ದು, ಈತ ಕಾರವಾರದ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಇ ವ್ಯಾಸಂಗ ಮಾಡಿದ್ದನು. ಈ ವೇಳೆ ಈತ ತನ್ನ ಜೂನಿಯರ್‌ ಯುವಕನೊಂದಿಗೆ ರೂಮಿನಲ್ಲಿ ಉಳಿಯುತ್ತಿದ್ದು, ಎಂ.ಟೆಕ್ ಪದವೀಧರನಿಗೆ ತನ್ನ ಜೂನಿಯರ್‌ ಮೇಲೆ ಪ್ರೀತಿ ಅರಳಿತ್ತು.

ಬಿ.ಇ ವ್ಯಾಸಂಗ ಮಾಡುತ್ತಿದ್ದ ವೇಳೆ ಇಬ್ಬರು ಪ್ರೀತಿ ಮಾಡುತ್ತಿದ್ದೆವು. ಆತನಿಗೆ ಕಾಲೇಜು ಫೀಸ್ ಕಟ್ಟಲು ಹಣದ ಸಹಾಯ ಕೂಡ ಮಾಡಿದ್ದೇನೆ ಎಂದು ಎಂಟೆಕ್ ಪದವೀಧರ ಹೇಳಿದ್ದಾನೆ.

ಈ ಪದವೀಧರನ ವಿಚಿತ್ರ ವರ್ತನೆಯಿಂದಲೇ ಕಂಗೆಟ್ಟಿದ್ದ ಅವನ ಪಾಲಕರು ಸೋಮವಾರ ಕಾರವಾರ ನಗರ ಪೊಲೀಸ್ ಠಾಣೆಗೆ ಕರೆ ತಂದಿದ್ದರು. ತಮ್ಮ ಮಗನ ಈ ರೀತಿಯ ವರ್ತನೆಗೆ ಆ ಜೂನಿಯರ್‌ ಯುವಕನೇ ಕಾರಣ ಎಂದು ಆರೋಪಿಸಿದ್ದಾರೆ.
ಪಾಲಕರು, ಹಾಗೂ ಅವನಲ್ಲ ಅವಳಂತಿದ್ದ ಯುವಕನ ಆರೋಪಗಳ ನಡುವೆ ಕಂಗೆಟ್ಟು ಪೊಲೀಸರು ತಲೆ ಕೆಡಿಸಿಕೊಂಡಿದ್ದಾರೆ.
ಬಳಿಕ ಪೋಷಕರು ಹಾಗೂ ಯುವಕನಿಗೆ ಪೊಲೀಸರು ಬುದ್ದಿ ಹೇಳಿ ಕಳಿಸಿದ್ದು,  ಆ ಜೂನಿಯರ್ ಯುವಕ ಈಗ ಕಾರವಾರದಲ್ಲಿಲ್ಲ. ಅವನ ಊರು ಬೆಳಗಾವಿ ಜಿಲ್ಲೆಯ ರಾಮದುರ್ಗ. ಅಲ್ಲಿಯೇ ಹೋಗಿ ಕೇಳಿಕೊಳ್ಳಿ ಎಂದು ಅವರನ್ನು ಸಾಗಾಕಿದ್ದಾರೆ.
ಒಟ್ಟಾರೆ, ನಾನವನಲ್ಲ ಅವಳು ಎಂದುಕೊಂಡು ನಗರದಲ್ಲಿ ಸುತ್ತಾಡಿದ ಈ ಪದವೀಧರ ಯುವಕನ ನೋಡಲು ಜನ ಮುಗಿಬಿದ್ದು ತಮಾಷೆ ಮಾಡಿಕೊಳ್ಳುತ್ತಿದ್ದಾರೆ.

Leave a Reply

Your email address will not be published.