ದೇಶದ ಪ್ರಜಾಪ್ರಭುತ್ವ, ಧರ್ಮ ನಿರಪೇಕ್ಷತೆ ಅಪಾಯದಲ್ಲಿದೆ : ದೆಹಲಿ ಆರ್ಚ್ ಬಿಷಪ್ ಆತಂಕ

ದೆಹಲಿಯ ಆರ್ಚ್ ಬಿಷಪ್ ಅನಿಲ್ ಕೂಟೋ ಪತ್ರವೊಂದನ್ನು ಬರೆದಿದ್ದಾರೆ. ‘ ದೇಶದಲ್ಲಿ ಒಂದು ರೀತಿಯ ಅಶಾಂತ ರಾಜಕೀಯ ವಾತವರಣ ಸೃಷ್ಟಿಯಾಗಿದೆ. ದೇಶದ ಪ್ರಜಾಪ್ರಭುತ್ವ ಹಾಗೂ ಧರ್ಮ ನಿರಪೇಕ್ಷತೆಗೆ ಆತಂಕ ಎದುರಾಗಿದೆ. 2019 ರ ಲೋಕಸಭೆ ಚುನಾವಣೆಗೂ ಮುನ್ನ ನಾವೆಲ್ಲರೂ ಪ್ರಾರ್ಥಿಸಬೇಕು ‘ ಎಂದು ಆಗ್ರಹಿಸಿದ್ದಾರೆ. ರಾಜಧಾನಿ ದೆಹಲಿಯಲ್ಲಿರುವ 8 ಚರ್ಚ್ ಗಳ ಪಾದ್ರಿಗಳಿಗೆ ಆರ್ಚ್ ಬಿಷಪ್ ಅನಿಲ್ ಕೂಟೋ ಈ ಪತ್ರವನ್ನು ಬರೆದಿದ್ದಾರೆ.

‘ ಒಂದು ಅಶಾಂತ ರಾಜಕೀಯ ವಾತಾವರಣ ನೋಡುತ್ತಿದ್ದೇವೆ. ಸಂವಿಧಾನದಲ್ಲಿ ಹೇಳಲಾಗಿರುವ ಲೋಕತಾಂತ್ರಿಕ ಸಿದ್ಧಾಂತಗಳಿಗೆ ಹಾಗೂ ನಮ್ಮ ದೇಶದ ಧರ್ಮನಿರಪೇಕ್ಷ ಭಾವನೆಗೆ ಆತಂಕವನ್ನುಂಟು ಮಾಡಿದೆ. ದೇಶ ಹಾಗೂ ರಾಜಕೀಯ ನಾಯಕರ ಹಿತಕ್ಕಾಗಿ ಪ್ರಾರ್ಥಿಸುವುದು ನಮ್ಮ ಪ್ರತಿಷ್ಠಿತ ಪರಂಪರೆಯಾಗಿದೆ. 2019 ರ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ನಾವೆಲ್ಲರೂ ಸೇರಿಕೊಂಡು ಪ್ರಾರ್ಥನಾ ಅಭಿಯಾನ ಶುರು ಮಾಡೋಣ ‘ ಎಂದು ಬರೆದಿದ್ದಾರೆ.

Leave a Reply

Your email address will not be published.