ರೆಸಾರ್ಟ್‌ನಲ್ಲಿರೋ ಶಾಸಕರ ಮೇಲೆ ಡೌಟ್‌ : ಬಿಜೆಪಿ ಪಾಲಾಗದಂತೆ ಕಾಯುತ್ತಿದ್ದಾರೆ ‘ಕೈ’ ನಾಯಕರು

ಬೆಂಗಳೂರು : ರಾಜ್ಯ ರಾಜಕೀಯದಲ್ಲಿ ಗೊಂದಲ ಇನ್ನೂ ಮುಂದುವರಿದಿದೆ. ನಾಳೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದು, ಈಗಾಗಲೆ ಅದಕ್ಕೆ ಎಲ್ಲಾ ರೀತಿಯ ಸಿದ್ಧತೆ ನಡೆದಿದೆ.

ಕಾಂಗ್ರೆಸ್‌  ಹಾಗೂ ಜೆಡಿಎಸ್‌ ಮೈತ್ರಿ ಸರ್ಕಾರಕ್ಕೆ 117 ಸಂಖ್ಯಾಬಲವಿದೆ. ಆದರೆ ಎಲ್ಲಿ ಬಿಜೆಪಿ ತನ್ನ ಶಾಸಕರನ್ನು ಆಮಿಷವೊಡ್ಡಿ ತನ್ನತ್ತ ಸೆಳೆದುಕೊಳ್ಳುತ್ತದೋ ಎಂಬ ಭೀತಿ ಎರಡೂ ಪಕ್ಷಗಳಿಗಿದ್ದು, ರೆಸಾರ್ಟ್‌ ರಾಜಕೀಯ ಶುರುವಾಗಿದೆ. ಆದರೆ ಬಹುಮತ ಪಡೆದು ಸರ್ಕಾರ  ರಚಿಸಬೇಕಿದ್ದ ಬಿಜೆಪಿಗೆ ಅಧಿಕಾರ ಕೈ ತಪ್ಪಿದ್ದಕ್ಕಾಗಿ ಕೈ ಕೈ ಹಿಸುಕಿಕೊಳ್ಳುವಂತಾಗಿದ್ದು, ಸದ್ಯ ದ ಪರಿಸ್ಥಿತಿಯಲ್ಲಿ ಮೌನಕ್ಕೆ ಶರಣಾಗಿದೆ.

ಆದರೆ ಇಂದು ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ್‌ ರಾವ್‌ ಹಾಗೂ ಯಡಿಯೂರಪ್ಪ ಇನ್ನೂ ಎರಡು ದಿನ ಬಾಕಿ ಇದೆ. ತಾಳ್ಮೆಯಿಂದಿರಿ ಎಂದಿರುವುದು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಾಳಯದಲ್ಲಿ ನಡುಕ ಹುಟ್ಟಿಸಿದೆ. ತಮ್ಮ ಶಾಸಕರು ರೆಸಾರ್ಟ್‌ನಲ್ಲಿದ್ದರೂ ಕಾಂಗ್ರೆಸ್‌  ಗೆ ಭಯ ಶುರುವಾಗಿದ್ದು, ಶಾಸಕರ ಮೇಲೆ  ಹದ್ದಿನ ಕಣ್ಣಿಟ್ಟು ಹಗಲು ರಾತ್ರಿ ಎನ್ನದೆ  ಕಾವಲು ಕಾಯುತ್ತಿದ್ದಾರೆ.

ಇಷ್ಟೆಲ್ಲಾ ಭದ್ರತೆ ಮಧ್ಯೆಯೂ ಶಾಸಕರು ಬಿಜೆಪಿ ತೆಕ್ಕೆಗೆ ಜಾರುತ್ತಾರಾ…..ಅಥವಾ ಕಾಂಗ್ರೆಸ್‌, ಜೆಡಿಎಸ್‌ ನಾಯಕರಿಗೆ ಸಾಥ್ ನೀಡಿ ಬಿಜೆಪಿಗೆ ಪಾಠ ಕಲಿಸುತ್ತಾರಾ ಎಂಬುದು ಇನ್ನೆರಡು ದಿನದ ಬಳಿಕವಷ್ಟೇ ತಿಳಿಯಲಿದೆ.

Leave a Reply

Your email address will not be published.