H.D ಕುಮಾರಸ್ವಾಮಿ ಪಟ್ಟಾಭಿಷೇಕಕ್ಕೆ ಯಾರ್ಯಾರು ಬರ್ತಾರೆ, ಸಿದ್ಧತೆ ಹೇಗಿದೆ…ಇಲ್ಲಿದೆ ಸಂಪೂರ್ಣ ಡಿಟೇಲ್ಸ್…

ಬೆಂಗಳೂರು : ನಾಳೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಅಧಿಕಾರ ಸ್ವೀಕರಿಸಲಿದ್ದಾರೆ. ವಿಧಾನಸೌಧದ ಎದುರು ನಡೆಯಲಿರುವ ಈ ಸಮಾರಂಭಕ್ಕೆ ಎಲ್ಲಾ ರೀತಿಯ ಸಿದ್ಧತೆಗಳು ನಡೆಯುತ್ತಿವೆ. ಸಾವಿರಾರು ಮಂದಿ ಅಭಿಮಾನಿಗಳು ನೆಚ್ಚಿನ ನಾಯಕ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಬರಲಿದ್ದಾರೆ. ಇನ್ನು ಕುಮಾರಸ್ವಾಮಿಯವರ ಪ್ರಮಾಣವಚನ ಸ್ವೀಕಾರಕ್ಕೆ ಅನೇಕ ರಾಜ್ಯದ ಮುಖ್ಯಮಂತ್ರಿಗಳು ಸೇರಿದಂತೆ ಅನೇಕ ನಾಯಕರು ಆಗಮಿಸಲಿದ್ದಾರೆ ಎಂದು ತಿಳಿದುಬಂದಿದೆ.

ಎಚ್‌ಡಿಕೆ ಪಟ್ಟಾಭಿಷೇಕಕ್ಕೆ ಯಾರ್ಯಾರು ಬರ್ತಾರೆ ?

ಎಚ್‌ಡಿಕೆ  ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮಕ್ಕೆ ಯಾವ ಯಾವ ನಾಯಕರು ಬರುತ್ತಾರೆ ಎಂಬುದರ ಪಟ್ಟಿಯನ್ನು ಕುಮಾರಸ್ವಾಮಿಯವರ  ಕಚೇರಿ ಬಿಡುಗಡೆ ಮಾಡಿದೆ.

ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ, ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ, ಪಶ್ಚಿಮ ಬಂಗಾಳ ಸಿಎಂ, ಮಮತಾ ಬ್ಯಾನರ್ಜಿ, ಬಿಎಸ್‌ಪಿ ನಾಯಕಿ ಮಾಯಾವತಿ, ಕೇರಳ ಸಿಎಂ ಪಿಣರಾಯಿ ವಿಜಯನ್‌, ತೆಲಂಗಾಣ ಸಿಎಂ ಕೆ. ಚಂದ್ರಶೇಖರ್‌ ರಾವ್‌, ಚಂದ್ರಶೇಖರ್‌ ರಾವ್‌ ಪುತ್ರ ಕೆ.ಟಿ ರಾಮರಾವ್‌, ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು, ಉತ್ತರ ಪ್ರದೇಶ ಮಾಜಿ ಸಿಎಂ ಅಖಿಲೇಶ್‌ ಯಾದವ್‌, ದೆಹಲಿ ಸಿಎಂ ಕೇಜ್ರಿವಾಲ್‌, ಮಾಜಿ ಕೇಂದ್ರ ಸಚಿವ ಅಜಿತ್‌ ಸಿಂಗ್‌, ಲಾಲೂ ಪ್ರಸಾದ್ ಯಾದವ್‌ ಪುತ್ರ ತೇಜಸ್ವಿ ಯಾದವ್‌, ನಟ ಕಮಲ್‌ ಹಾಸನ್‌ ಸೇರಿದಂತೆ ಇನ್ನೂ ಅನೇಕ ಮಂದಿ ಆಗಮಿಸಲಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com