ಎಚ್‌.ಡಿ ಕುಮಾರಸ್ವಾಮಿಯವರ ರಾಜಕೀಯ ಜೀವನ….ಸಿದ್ಧಾಂತಗಳ ಸಂಪೂರ್ಣ ಮಾಹಿತಿ ಇಲ್ಲಿದೆ…..

ಬುಧವಾರ ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡರ ಪುತ್ರ ಎಚ್‌.ಡಿ ಕುಮಾರಸ್ವಾಮಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಅವರು ಇಷ್ಟು ವರ್ಷ ರಾಜಕೀಯದ ಹಾದಿ ಹೇಗಿತ್ತು.  ಅವರ ರಾಜಕೀಯ ಜೀವನದ ಏರಿಳಿತಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಎಚ್‌.ಡಿ ಕುಮಾರಸ್ವಾಮಿ ಡಿಸೆಂಬರ್‌ 19, 1959ರಲ್ಲಿ  ಜನಿಸಿದ್ದು, ಕರ್ನಾಟಕದ 18ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡ ಹಾಗೂ ಚನ್ನಮ್ಮ ಅವರ ಪುತ್ರರಾಗಿರುವ ಎಚ್‌ಡಿಕೆ, ಜಾತ್ಯಾತೀತ ಜನತಾದಳ  ಪಕ್ಷದ ರಾಜ್ಯಾಧ್ಯಕ್ಷರಾಗಿದ್ದಾರೆ.

ರಾಜಕೀಯ ಅನುಭವವಿಲ್ಲದಿದ್ದರೂ 1996ರಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. 1998ರಲ್ಲಿ ಕನಕಪುರ ಲೋಕಸಭಾ ಕ್ಷೇತ್ರದಿಂದ ಹಾಗೂ 1999ರಲ್ಲಿ ಸಾತನೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲುಂಡ ಕುಮಾರಸ್ವಾಮಿ, 2004ರ ವಿಧಾನಸಭಾ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಿಂದ ಆಯ್ಕೆಯಾದರು.

ಕಾಂಗ್ರೆಸ್‌ ಹಾಗೂ ಜನತಾದಳ ಮೈತ್ರಿಕೂಟ ಸರ್ಕಾರ ಸ್ಥಾಪನೆಯ ಕಾಲದಲ್ಲಿ ಕುಮಾರಸ್ವಾಮಿ ಜನತಾದಳ ಕಾರ್ಯಾಧ್ಯಕ್ಷರಾದರು. 2005ರ ಡಿಸೆಂಬರ್‌ ಜಿಲ್ಲಾ ಪಂಚಾಯತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ ಜಯದೊಂದಿಗೆ ಬದಲಾದ ರಾಜಕೀಯ ಪರಿಸ್ಥಿತಿ ಹಾಗೂ ಕಾಂಗ್ರೆಸ್‌ ಮತ್ತು ಜನತಾದಳದಿಂದ ನಿರ್ಗಮಿಸಿದ್ದ ಸಿದ್ದರಾಮಯ್ಯನವರ  ನಡುವಿನ ಮೈತ್ರಿಯ ಮಾತುಕತೆಯಿಂದ ಅತೃಪ್ತರಾಗಿದ್ದ ಕುಮಾರಸ್ವಾಮಿ2006ರ ಜನವರಿ 18ರಂದು ದೇವೇಗೌಡರ ಇಚ್ಛೆಯ ವಿರುದ್ಧ ಪಕ್ಷದ 46 ಶಾಸಕರೊಂದಿಗೆ ಕಾಂಗ್ರೆಸ್‌ಗೆ ಕೊಟ್ಟಿದ್ದ ಬೆಂಬಲವನ್ನು ಹಿಂಪಡೆದಿದ್ದರು.

ಬಳಿಕ 2006ರ ಫೆಬ್ರವರಿಯಲ್ಲಿ ಬಿಜೆಪಿಯ ಸಹಕಾರದೊಂದಿಗೆ ಕರ್ನಾಟಕದ 18ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಬಳಿಕ 2007ರಲ್ಲಿ ಬಿಜೆಪಿಗೆ ಅಧಿಕಾರ ನೀಡದೆ ಬಹುಮತ ಕಳೆದುಕೊಂಡಿದ್ದರು.

ಈಗ ಬಿಜೆಪಿ ಹಾಗೂ ಕಾಂಗ್ರೆಸ್‌  ನಡುವಿನ ಹೋರಾಟದ ಮಧ್ಯೆ ಲಾಭ ಪಡೆದುಕೊಂಡಿರುವ ಕುಮಾರಸ್ವಾಮಿ, ಈಗ ಮತ್ತೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com